ಲಂಡನ್: ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಹೆಬ್ಬೆರಳಿನ ಗಾಯಕ್ಕೊಳಗಾಗಿ ಮುಂದಿನ ಮೂರು ವಾರಗಳ ಕಾಲ ತಂಡದಿಂದ ಹೊರಬಿದ್ದಿದ್ದಾರೆ. ಇದರ ಮಧ್ಯೆ ಕೂಡ ಗಬ್ಬರ್ ಸಿಂಗ್ ತಂಡದ ಸಹ ಆಟಗಾರರೊಂದಿಗೆ ಜಿಮ್ನಲ್ಲಿ ಬೆವರು ಹರಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ತಂಡದ ಸಹ ಆಟಗಾರರೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಶಿಖರ್ ಧವನ್, ಇದೀಗ ಜಿಮ್ನಲ್ಲಿ ಸಖತ್ ಬೆವರು ಹರಿಸಿದ್ದಾರೆ. ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದರೂ, ಇತರೆ ಆಟಗಾರರಂತೆ ವರ್ಕೌಟ್ ಮಾಡಿದ್ದಾರೆ. ಅದರ ವಿಡಿಯೋ ತುಣಕುವೊಂದನ್ನ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ. 'ಇಂತಹ ಸಂದರ್ಭಗಳಿಂದ ಹೇಗೆ ಪುಟಿದೇಳಬೇಕು ಎಂಬುದು ನನಗೆ ಗೊತ್ತಿದೆ. ನಿಮ್ಮ ಸಪೋರ್ಟ್ಗೆ ನಾನು ಚಿರಋಣಿ' ವಿಡಿಯೋ ಜತೆಗೆ ಬರೆದುಕೊಂಡಿದ್ದಾರೆ.