ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಳ್ಳುತ್ತಿದ್ದಂತೆ ಇಂಗ್ಲೆಂಡ್ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಅದಾದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಾರಂಭಗೊಳ್ಳಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಂ ಇಂಡಿಯಾ ಆರಂಭಿಕವಾಗಿ ವೆಸ್ಟ್ ವಿಂಡೀಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮುನ್ನ ಟೀಂ ಇಂಡಿಯಾದ ಏಳು ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರು ಕೌಂಟಿ ಕ್ರಿಕೆಟ್ನಲ್ಲಿ ಅಬ್ಬರಿಸಲು ಹೊರಡಲಿದ್ದಾರೆ.
ಚೇತೇಶ್ವರ್ ಪೂಜಾರ,ಅಜಿಂಕ್ಯಾ ರಹಾನೆ,ಪೃಥ್ವಿ ಶಾ,ಹನುಮ ವಿಹಾರಿ,ಮಯಾಂಕ್ ಅಗರವಾಲ್,ಆರ್.ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಇಂಗ್ಲೆಂಡ್ನಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ನಲ್ಲಿ ಭಾಗಿಯಾಗಲಿದ್ದಾರೆ. ವಿಶ್ವಕಪ್ ಮುಗಿಯುತ್ತಿದ್ದಂತೆ ಈ ಪ್ಲೇಯರ್ಸ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ತಂಡದ ಭಾಗವಾಗುವುದು ಸ್ಪಷ್ಟವಾಗಿದೆ.
ಈಗಾಗಲೇ ಚೇತೇಶ್ವರ್ ಪೂಜಾರಾ ಹಾಗೂ ಇಶಾಂತ್ ಶರ್ಮಾ ಕೌಂಟಿಯಲ್ಲಿ ಭಾಗಿಯಾಗಿದ್ದು, ಇದೀಗ ಉಳಿದ ಪ್ಲೇಯರ್ಸ್ ಕೂಡ ಅದರಲ್ಲಿ ಭಾಗಿಯಾಗಲಿದ್ದಾರೆ. ವಿಶ್ವಕಪ್ ಆರಂಭಗೊಳ್ಳುತ್ತಿದ್ದಂತೆ ಟೀಂ ಇಂಡಿಯಾದ ಕೆಲ ಪ್ರಮುಖ ಆಟಗಾರರು ಫ್ರಿಯಾಗಿರುವ ಕಾರಣ, ಬಿಸಿಸಿಐ ಕೂಡ ಕೌಂಟಿಯಲ್ಲಿ ಆಡಲು ಅನುಮತಿ ನೀಡುವ ಸಾಧ್ಯತೆ ಇದೆ.