ಚಾಮರಾಜನಗರ: ಕೊರೊನಾ ಲಾಕ್ಡೌನ್ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 189 ಮಂದಿ ಸಿಬ್ಬಂದಿ ಸೇವೆಯನ್ನು ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಲಾಕ್ಡೌನ್ನಿಂದಾಗಿ ನಿರೀಕ್ಷಿತ ಆದಾಯ ಬಾರದಿರುವುದರಿಂದ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಸೋಹ ವಿಭಾಗ, ಸ್ವಚ್ಛತಾ, ಲಾಡು ತಯಾರಿಕಾ ವಿಭಾಗ, ಸೆಕ್ಯುರಿಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 189 ನೌಕರರನ್ನು ಜೂನ್ 4ರಿಂದಲೇ ಪೂರ್ವಾನ್ವಯವಾಗುವಂತೆ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶಿಸಿದ್ದಾರೆ.
ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶ, ವಿವಿಧ ಸೇವೆಗಳಿಗೆ ಆಗಿಂದಾಗ್ಗೆ ನಿಷೇಧ ಹೇರುತ್ತಿರುವ ಹಿನ್ನೆಲೆ ಜೊತೆಗೆ ದಾಸೋಹ ಸೇವೆಯೂ ಕೂಡ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿಲ್ಲದಿರುವುದರಿಂದ, ಲಾಡು ಮಾರಾಟ ಸಹ ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿರುವುದರಿಂದ ಆದಾಯ ಕುಸಿದಿದೆ.
ಮಾದಪ್ಪನ ಬೆಟ್ಟದ 189 ಸಿಬ್ಬಂದಿ ಸೇವೆಗೆ ಬ್ರೇಕ್.. ! ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆ ಅನ್ವಯ ದೇವಾಲಯದ ಆದಾಯದಲ್ಲಿ ಶೇ.35 ಭಾಗವನ್ನು ಮಾತ್ರ ಬಳಸಿಕೊಳ್ಳಲು ಅವಕಾಶವಿದ್ದು, ಇದರಿಂದಾಗಿ ಖಾಯಂ ನೌಕರರಿಗೆ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ.
ಆದುದರಿಂದ ಮುಂದಿನ ದಿನಗಳಲ್ಲಿ ದೇವಾಲಯವು ಸಂಪೂರ್ಣವಾಗಿ ತೆರೆಯಲ್ಪಡುವವರೆಗೆ 189 ನೌಕರರನ್ನು ಸೇವೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದ ನೌಕರರ ಪೈಕಿ 26 ಮಂದಿ ಸೇವೆಗೆ ಹಾಜರಾಗಿರಲಿಲ್ಲ. ಇವರನ್ನು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮಾದಪ್ಪನ ಬೆಟ್ಟದ 189 ಸಿಬ್ಬಂದಿ ಸೇವೆಗೆ ಬ್ರೇಕ್.. !