ಕರ್ನಾಟಕ

karnataka

ETV Bharat / briefs

ಮಹಾನಗರ ಪಾಲಿಕೆ ಆದಾಯಕ್ಕೂ ಪೆಟ್ಟು ನೀಡಿದ ಎರಡನೇ ಅಲೆ ! - hubli news

ಅವಳಿನಗರದ ಜನರಿಗೆ ಆಸ್ತಿ ಕರ ಹಾಗೂ ಇನ್ನಿತರ ತೆರಿಗೆ ಪಾವತಿಸಲು ಅನುಕೂಲಕರವಾಗುವಂತೆ ಸ್ಥಾಪಿಸಿದ್ದ ಎಚ್-ಡಿ- 01 ಕೇಂದ್ರಗಳನ್ನು ಬಂದ್ ಮಾಡಿರುವ ಹಿನ್ನೆಲೆ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ.

 second wave of corona effect to the hubli mahanagara palike
second wave of corona effect to the hubli mahanagara palike

By

Published : Jun 8, 2021, 7:53 PM IST

Updated : Jun 8, 2021, 9:40 PM IST

ಹುಬ್ಬಳ್ಳಿ: ಕಿಲ್ಲರ್ ಕೊರೊನಾ ವೈರಸ್ ಎಲ್ಲೆಡೆಯೂ ಆತಂಕವನ್ನು ಸೃಷ್ಟಿಸಿರುವುದು ಮಾತ್ರವಲ್ಲದೇ, ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಿಂದ ಹು-ಧಾ ಮಹಾನಗರ ಪಾಲಿಕೆಗೆ ತೆರಿಗೆ ಸಂಗ್ರಹಣೆಯಲ್ಲಿ ಹಿನ್ನಡೆಯಾಗಿದೆ.

ಹೌದು.., ಹು-ಧಾ ಮಹಾನಗರ ಪಾಲಿಕೆ ಆದಾಯದ ಮೇಲೆ ಕೊರೊನಾ ಪೆಟ್ಟು ಬಲವಾಗಿ ಬಿದ್ದಿದ್ದು, ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳ ಮಾಹೆಯಲ್ಲಿ 22 ಕೋಟಿ 87 ಲಕ್ಷ ತೆರಿಗೆ ಸಂಗ್ರಹವಾಗಿದೆ. ಕಳೆದ ಲಾಕ್ ಡೌನ್ ಸಂದರ್ಭದಲ್ಲಿ 36 ಕೋಟಿಯಷ್ಟು ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಲಾಕ್​​​ಡೌನ್ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆಗೆ ಆದಾಯದ ಹೊಡೆತ ಬಿದ್ದಂತಾಗಿದೆ.

ಮಹಾನಗರ ಪಾಲಿಕೆ ಆದಾಯಕ್ಕೂ ಪೆಟ್ಟು ನೀಡಿದ ಎರಡನೇ ಅಲೆ !

ಕೊರೊನಾ ಎರಡನೇ ಅಲೆಯ ತೀವ್ರತೆ ತಗ್ಗಿಸಲು ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ನಿರ್ಬಂಧಗಳಿಂದ ಹುಬ್ಬಳ್ಳಿ- ಧಾರವಾಡದ ಅವಳಿನಗರದ ಜನರಿಗೆ ಆಸ್ತಿ ಕರ ಹಾಗೂ ಇನ್ನಿತರ ತೆರಿಗೆ ಪಾವತಿಸಲು ಅನುಕೂಲಕರವಾಗುವಂತೆ ಸ್ಥಾಪಿಸಿದ್ದ ಎಚ್-ಡಿ- 01 ಕೇಂದ್ರಗಳನ್ನು ಬಂದ್ ಮಾಡಿರುವ ಹಿನ್ನೆಲೆ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ.

ಒಟ್ಟಿನಲ್ಲಿ ಎಲ್ಲರಿಗೂ ಆರ್ಥಿಕ ಸಂಕಷ್ಟ ತಂದೊಡ್ಡಿರುವ ಕೊರೊನಾ ಈಗ ಮಹಾನಗರ ಪಾಲಿಕೆ ಆದಾಯಕ್ಕೂ ಕೊಡಲಿ ಪೆಟ್ಟು ಹಾಕಿದೆ. ಸಾರ್ವಜನಿಕರಿಗೆ ಉದ್ಯೋಗ, ಆದಾಯವಿಲ್ಲದೇ ಕರ ಪಾವತಿಸಲು ಕೂಡ ಹಣವಿಲ್ಲದಂತಾಗಿದ್ದು, ಆದಾಯ ಆಕರಣೆಯಲ್ಲಿ ಹಿನ್ನೆಡೆಯಾಗುವಂತಾಗಿದೆ.

Last Updated : Jun 8, 2021, 9:40 PM IST

ABOUT THE AUTHOR

...view details