ಕರ್ನಾಟಕ

karnataka

ETV Bharat / briefs

ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ: ಪರೀಕ್ಷಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ - undefined

ನಾಳೆ ಬೆಳಗ್ಗೆ 10-15 ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದೆ.

ಪಿಯು ಪರೀಕ್ಷೆ ಆರಂಭ

By

Published : Feb 28, 2019, 9:13 PM IST

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆಯಿಂದ (ಮಾರ್ಚ್ 1)ಆರಂಭವಾಗುವ ಪರೀಕ್ಷೆಗೆ ಇಂದು ಸಕಲ ಪೂರ್ವಸಿದ್ಧತೆಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾಗಿದೆ.

ನಾಳೆ ಬೆಳಗ್ಗೆ 10-15 ರಿಂದ ಪರೀಕ್ಷೆ ಆರಂಭವಾಗಲಿದ್ದು, ಪದವಿ ಪೂರ್ವ ಕೋರ್ಸ್​ಗಳ 34 ವಿಷಯಗಳು ಹಾಗೂ ಎನ್​ಎಸ್​ಕ್ಯೂಎಫ್​ನ 5 ವಿಷಯಗಳು ಇರುತ್ತವೆ. ಒಟ್ಟು 38 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ.

ಪರೀಕ್ಷಾ ಅಕ್ರಮವನ್ನು ತಡೆಗಟ್ಟಲು ಪಿಯು ಬೋರ್ಡ್ ಪೂರ್ವ ಸಿದ್ಧತೆಗಳನ್ನು ನಡೆಸ್ತಾ ಇದ್ದು, ಸಿಸಿಟಿವಿ ಕಣ್ಗಾವಲು ಹಾಗೂ ಪೊಲೀಸ್ ಭದ್ರತೆಯೊಂದಿಗೆ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟುನಿಟ್ಟಿನಿಂದ ನಡೆಸಲು ಪಿಯು ಬೋರ್ಡ್ ನಿರ್ಧರಿಸಿದೆ.

ಈ ಬಾರಿ ನಗರ- ಗ್ರಾಮೀಣ ಸೇರಿ ಒಟ್ಟು 1013 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 3,38,868 ಬಾಲಕರು 3,34,738 ಬಾಲಕಿಯರು ಸೇರಿ ಒಟ್ಟು 6.73,606 ವಿದ್ಯಾರ್ಥಿಗಳು ಪರೀಕ್ಷೆಯನ್ನೆದುರಿಸಲಿದ್ದಾರೆ. ಈ ಪೈಕಿ 85,542 ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯಲಿದ್ದಾರೆ.

ಇನ್ನು ಪರೀಕ್ಷಾ ಅಕ್ರಮ ತಡೆಗಟ್ಟಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿದ್ದು, ಪರೀಕ್ಷಾ ಅಕ್ರಮ ತಡೆಯಲು ಎಚ್ಚರಿಕೆ ವಹಿಸಲಾಗಿದೆ.
ವಿದ್ಯಾರ್ಥಿಯ ಬಳಿ ಪ್ರಶ್ನೆ ಪತ್ರಿಕೆಗಳು ಮುಂಚಿತವಾಗಿ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಶೇ. 90 ರಷ್ಟು ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿಡಲಾಗಿದೆ. ಪರೀಕ್ಷಾ ಕೇಂದ್ರದ 200 ಮೀ ವ್ಯಾಪ್ತಿಯನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗಿದೆ.

ಯಾವುದೇ ಗೊಂದಲಗಳು ಕಂಡುಬಂದಲ್ಲಿ ಸಹಾಯವಾಣಿ ಮೂಲಕ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಲು ಪಿಯು ಬೋರ್ಡ್ ಸಹಾಯವಾಣಿಯನ್ನು ನಿಯೋಜಿಸಿದೆ.10:15 ಪರೀಕ್ಷೆ ಆರಂಭವಾಗಲಿದ್ದು, ಹಾಜರಾತಿ ಪೂರ್ಣವಾಗಿರದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನಿರ್ಬಂಧ ಹೇರಲಾಗಿದೆ.

ಇದೇ ಮೊದಲ ಬಾರಿಗೆ ಆನ್​​ಲೈನ್ ಮೂಲಕ ಮೌಲ್ಯಮಾಪನ ಮಾಡಿದ ಅಂಕಗಳು ಕೇಂದ್ರದಿಂದಲೇ ನೇರವಾಗಿ ಅಪ್​ಲೋಡ್ ಆಗಲಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ಉತ್ತರ ಪತ್ರಿಕೆ ಕೊಠಡಿಗಳಿಗೆ 24 ಗಂಟೆಗಳ ಕಾಲ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

For All Latest Updates

TAGGED:

ABOUT THE AUTHOR

...view details