ಕರ್ನಾಟಕ

karnataka

ETV Bharat / briefs

ಬಾಟಲಿಗಳನ್ನು ಮರಕ್ಕೆ ಕಟ್ಟಿ, ಪಕ್ಷಿಗಳಿಗೆ ನೀರುಣಿಸಲು ಮುಂದಾದ ಪುಟಾಣಿ ಸೈನ್ಯ

ಬಿಸಿಲಿನ ತಾಪಕ್ಕೆ ಮನುಷ್ಯರೇ ತತ್ತರಿಸುವ ಸಮಯದಲ್ಲಿ ಈ ಚಿಕ್ಕ ಮಕ್ಕಳು ಪಕ್ಷಿಗಳಿಗೆ ನೀರುಣಿಸುವ ಪ್ರಯತ್ನಕ್ಕೆ ಮುಂದಾಗಿ ಸುಮಾರು 50 ಕ್ಕೂ ಹೆಚ್ಚು ಮರಗಳಿಗೆ ನಿರುಪಯುಕ್ತ ಬಾಟಲಿಗಳನ್ನು ಕಟ್ಟಿ ನೀರು ತುಂಬಿಸಿದ್ದಾರೆ.

birds

By

Published : Apr 12, 2019, 4:50 AM IST

ಬಳ್ಳಾರಿ: ಬೇಸಿಗೆಯ ಬಿಸಿಲಿಗೆ ನೀರು ಸಿಗದೆ ಪಕ್ಷಿಗಳು ಪರಿತಪಿಸುವುದನ್ನು ತಪ್ಪಿಸಲು ಚಿಕ್ಕ ಮಕ್ಕಳು ಹತ್ತಾರು ಮರಗಳಿಗೆ ನಿರುಪಯುಕ್ತ ಬಾಟಲ್​ಗಳನ್ನು ಕಟ್ಟುವ ಮೂಲಕ ಅದಕ್ಕೆ ನೀರು ತುಂಬಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.

ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಾಮಿಕ ಶಾಲೆಯ ಚಿಕ್ಕ ಮಕ್ಕಳು ಇಂದು ಮಧ್ಯಾಹ್ನ ನಗರದ ಬಸವ ಭವನದ ಪ್ರದೇಶದಲ್ಲಿನ ಮರಗಳಿಗೆ ನಿರುಪಯುಕ್ತ ಬಾಟಲಿನಲ್ಲಿ ನೀರು ಹಾಕಿ ಅವುಗಳಿಗೆ ತಂತಿಕಟ್ಟಿ ಗಿಡಗಳಿಗೆ ನೇತು ಹಾಕುವ ಮೂಲಕ ಪ್ಕಷಿಪ್ರೇಮ ಮೆರದರು. ಈ ಕಾರ್ಯದಲ್ಲಿ ಭಾಗವಹಿಸಿದವರೆಲ್ಲಾ ಪುಟಾಣಿ ಮಕ್ಕಳು ಎಂಬುದೇ ವಿಶೇಷವಾಗಿತ್ತು.

ನಿನ್ನೆ ಮಧ್ಯಾಹ್ನ 2 ಗಂಟೆ 30 ನಿಮಿಷದಿಂದ ಗಿಡಗಳಿಗೆ ಬಾಟಲಿನಲ್ಲಿ ನೀರು ಹಾಕಿ ಕಟ್ಟಲು ಪ್ರಾರಂಭ ಮಾಡಿದ ಮಕ್ಕಳು ಸಂಜೆ 5 ಗಂಟೆವರೆಗೆ ಸುಮಾರು 52 ಮರಗಳಿಗೆ ಬಾಟಲುಗಳಲ್ಲಿ ಮರಗಳಿಗೆ ನೇತುಹಾಕಿದರು . ಪ್ರತಿಯೊಂದು ಮರಕ್ಕೆ ಒಂದು ಬಾಟಲನ್ನು ಕಟ್ಟಿ, ಅದಕ್ಕೆ ನೀರು ಹಾಕಿ, ಕಾಳು ಹಾಕಲು ಪ್ರತ್ಯೇಕ ಬಟ್ಟಲು ನಿರ್ಮಾಣ ಮಾಡಿದರು. ಏಣಿ, ಬಕೆಟ್​ನಲ್ಲಿ ನೀರು, ಕಾಳುಗಳಾದ ಅಕ್ಕಿ, ಗೋಧಿ, ಶೇಂಗಾ, ದ್ರಾಕ್ಷಿ ಸೇರಿದಂತೆ ಹಲವು ರೀತಿಯ ತನಿಸುಗಳನ್ನು ಪುಟಾಣಿಗಳು ತೆಗದುಕೊಂಡು ಹೋಗಿ ಬಾಟಲಿಗಳಿಗೆ ಹಾಕಿದ್ದು ವಿಶೇಷವಾಗಿತ್ತು.

ಮರಕ್ಕೆ ಬಾಟಲಿ ಕಟ್ಟಿ ನೀರು ತುಂಬಿಸುತ್ತಿರುವ ಮಕ್ಕಳು

ಈ ಕಾರ್ಯದಲ್ಲಿ ಹಿರಿಯರಾದ ಪದ್ಮಾವತಿ ಮತ್ತು ಮಕ್ಕಳಾದ ಐ.ಪ್ರಕಾಶ್, ಸಲಿಂ ಮಹಮ್ಮದ್, ಕೊಟ್ರೇಶ್, ಕೀರ್ತಿ, ಆಫ್ರೀನ್, ಐಶ್ವರ್ಯ, ಅಂಜುಮ್, ರೋಜಿ, ಆ್ಯಸಿನ್, ದೀಪಕ್, ಭಾಗವಹಿಸಿದ್ದರು.

ಬಳ್ಳಾರಿಯಲ್ಲಿ ಬಿಸಿಲಿನ ತಾಪಕ್ಕೆ ಮನುಷ್ಯರೇ ತತ್ತರಿಸುವ ಸಮಯದಲ್ಲಿ ಈ ಚಿಕ್ಕ ಮಕ್ಕಳು ಪಕ್ಷಿಗಳಿಗೆ ನೀರುಣಿಸುವ ಪ್ರಯತ್ನ ಮಾಡಿದ್ದು ವಿಶೇಷವಾಗಿತ್ತು. ಇಂದಿನ ಮಕ್ಕಳಲ್ಲಿ ಪರಿಸರ ಕುರಿತು ಜಾಗೃತಿನ ಮೂಡಿಸಿದರೆ ಮುಂದಿನ ಪೀಳಿಗೆಯಲ್ಲಿ ತಾವಾಗಿಯೇ ಪ್ರಕೃತಿ ಉಳಿವಿಗೆ ಶ್ರಮಿಸುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ಶಾಲೆಗಳಲ್ಲೂ ಹಮ್ಮಿಕೊಂಡು ಮಕ್ಕಳಿಗೆ ಪರಿಸರ ಪ್ರೇಮದ ಜೊತೆಗೆ ಪಕ್ಷಿಗಳ ದಾಹ ತೀರಿಸುವುದಕ್ಕೆ ಪ್ರಯತ್ನ ಮಾಡಬೇಕಾಗಿದೆ.

ABOUT THE AUTHOR

...view details