ಕರ್ನಾಟಕ

karnataka

ETV Bharat / briefs

ರಫೇಲ್​ ಡೀಲ್​... ಕೇಂದ್ರಕ್ಕೆ ಹಿನ್ನಡೆ, ಸೋರಿಕೆಯಾದ ದಾಖಲೆಗಳು ಸಾಕ್ಷಿ: ಸುಪ್ರೀಂ

ರಫೇಲ್​ ಡೀಲ್​ನಲ್ಲಿ ಮೋದಿ ಸರ್ಕಾರಕ್ಕೆ ಈ ಹಿಂದೆ ನೀಡಿದ್ದ ಕ್ಲೀನ್​ ಚಿಟ್​ಅನ್ನು ಸುಪ್ರೀಂ ಹಿಂಪಡೆದಿದೆ.

By

Published : Apr 10, 2019, 11:06 AM IST

Updated : Apr 10, 2019, 11:14 AM IST

ಸುಪ್ರೀಂ

ನವದೆಹಲಿ: ರಫೇಲ್​ ಡೀಲ್​ ಸಂಬಂಧಿಸಿದಂತೆ ಸೋರಿಕೆಯಾಗಿರುವ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸದಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ.

ಈ ಮೂಲಕ ರಫೇಲ್​ ಡೀಲ್​ನಲ್ಲಿ ಮೋದಿ ಸರ್ಕಾರಕ್ಕೆ ಈ ಹಿಂದೆ ನೀಡಿದ್ದ ಕ್ಲೀನ್​ ಚಿಟ್​ಅನ್ನು ಸುಪ್ರೀಂ ಹಿಂಪಡೆದಿದೆ.

ಮುಖ್ಯ ನ್ಯಾಯಮೂರ್ತಿಗಳಾದ ರಂಜನ್​ ಗೊಗೊಯಿ, ಜಸ್ಟೀಸ್​ ಎಸ್​ ಕೆ ಕೌಲ್​ ಹಾಗೂ ಕೆ ಎಂ ಜೋಸೆಫ್​ ಅವರನ್ನೊಳಗೊಂಡ ಪೀಠವು ಪ್ರತಿವಾದಿಗಳಾದ ಪ್ರಶಾಂತ್​ ಭೂಷಣ್​, ಅರುಣ್​ ಶೌರಿ ಸಲ್ಲಿಸಿರುವ ಹೊಸ ಸಾಕ್ಷಿಗಳನ್ನು ಪರಿಶೀಲಿಸಲಿದೆ.

ಸೋರಿಕೆಯಾಗಿರುವ ದಾಖಲೆಗಳು ಬರೇ ನಕಲು ಅಥವಾ ಫೋಟೊ ಕಾಪಿಗಳಾಗಿರುವ ಕಾರಣ ಅದನ್ನು ಸಾಕ್ಷಿಯಾಗಿ ಪರಿಗಣಿಸಕೂಡದು ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿತ್ತು. ಆದರೆ, ಅದನ್ನೂ ಕೂಡ ಸಾಕ್ಷಿಯಾಗಿ ಪರಿಗಣಿಸಬಹುದು ಎಂದು ಪೀಠವು ಹೇಳಿದೆ.

ನೀವು ಸಾಕ್ಷಿ ಕೇಳಿದ್ದಿರಿ ನಾವು ಅನದನ್ನು ಕೊಟ್ಟಿದ್ದೇವೆ. ನಾವು ಹಾಜರುಪಡಿಸಿರುವ ದಾಖಲೆಗಳು ಸೇನೆಗೆ ಸಂಬಂಧಿಸಿದ್ದಾದ್ದರಿಂದ ಅವನ್ನು ಪರಿಗಣಿಸಲೇಬೇಕೆಂದು ನಾವು ವಾದ ಮಂಡಿಸಿದ್ದೆವು ಹಾಗಾಗಿ ಸುಪ್ರೀಂ ಕೋರ್ಟ್​ ಅವನ್ನು ಪರಿಗಣಿಸಲು ಒಪ್ಪಿದೆ ಎಂದು ವಕೀಲ ಪ್ರಶಾಂತ್​ ಭೂಷಣ್​ ಹೇಳಿದ್ದಾರೆ.

Last Updated : Apr 10, 2019, 11:14 AM IST

ABOUT THE AUTHOR

...view details