ಕರ್ನಾಟಕ

karnataka

ETV Bharat / briefs

ರಫೇಲ್​ ಜೆಟ್ ಅಲಂಕಾರಕ್ಕೆ ಇರೋದಲ್ಲ... ಸುಪ್ರೀಂನಲ್ಲಿ ಕೇಂದ್ರದ ವಾದ - ಸುಪ್ರೀಂ ಕೋರ್ಟ್​

ರಫೇಲ್​ ಜೆಟ್​ ಎನ್ನುವುದು ಅಲಂಕಾಕ್ಕೆ ಇರುವುದಲ್ಲ. ನಮ್ಮೆಲ್ಲರ ರಕ್ಷಣೆಗೆ ಈ ಯುದ್ಧ ವಿಮಾನ ಅತೀ ಅಗತ್ಯವಾಗಿದೆ. ಇಂತಹ ವಿಚಾರ ದೇಶದ ಯಾವುದೇ ಕೋರ್ಟ್ ಮುಂದೆ ಬರುವುದಿಲ್ಲ ಎಂದು ಇಂದಿನ ವಿಚಾರಣೆ ವೇಳೆ ಕೇಂದ್ರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಮುಖ್ಯ ನ್ಯಾಯಾಧೀಶರಿಗೆ ಹೇಳಿದ್ದಾರೆ.

ಸುಪ್ರೀಂ

By

Published : May 10, 2019, 4:59 PM IST

ನವದೆಹಲಿ:ರಫೇಲ್​​​​ ಒಪ್ಪಂದದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ತೀರ್ಪನ್ನು ಕಾಯ್ದಿರಿಸಿದೆ.

ರಫೇಲ್​ ಜೆಟ್​ ಎನ್ನುವುದು ಅಲಂಕಾರಕ್ಕೆ ಇರುವುದಲ್ಲ. ನಮ್ಮೆಲ್ಲರ ರಕ್ಷಣೆಗೆ ಈ ಯುದ್ಧ ವಿಮಾನ ಅತೀ ಅಗತ್ಯವಾಗಿದೆ. ಇಂತಹ ಸೂಕ್ಷ್ಮ ವಿಚಾರ ದೇಶದ ಯಾವುದೇ ಕೋರ್ಟ್ ಮುಂದೆ ಬರುವುದಿಲ್ಲ ಎಂದು ಇಂದಿನ ವಿಚಾರಣೆ ವೇಳೆ ಕೇಂದ್ರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಮುಖ್ಯ ನ್ಯಾಯಾಧೀಶರಿಗೆ ಹೇಳಿದ್ದಾರೆ.

ರಫೇಲ್ ಡೀಲ್ ಎನ್ನುವುದು ದೇಶದ ಭದ್ರತೆಯ ವಿಚಾರವಾಗಿದ್ದು ಇದನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸೂಕ್ತವಲ್ಲ ಎಂದು ವೇಣುಗೋಪಾಲ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಎಲ್ಲ ವಾದ ವಿವಾದವನ್ನು ಆಲಿಸಿದ ಕೋರ್ಟ್​ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಡಿಸೆಂಬರ್​ 14ರಂದು ರಫೇಲ್​ ಡೀಲ್ ವಿವಾದಲ್ಲಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಕ್ಲೀನ್​ಚಿಟ್ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿತ್ತು.

'ಚೌಕಿದಾರ್ ಚೋರ್ ಹೇ' ಎನ್ನುವ ರಾಹುಲ್ ಗಾಂಧಿಯ ಘೋಷಣೆಯು ನಿಂದನೆ ಎಂದು ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದು ರಫೇಲ್ ವಿವಾದಕ್ಕೆ ಸಂಬಂಧಿತವಾಗಿದ್ದರಿಂದ ಈ ಪ್ರಕರಣವನ್ನೂ ಇಂದೇ ಕೋರ್ಟ್​ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ರಾಹುಲ್ ಗಾಂಧಿಯ ವಿವಾದಿತ ಘೋಷಣೆಯ ಬಗೆಗಿನ ವಿಚಾರಣೆ ಇಂದು ನಡೆದಿದೆ. ಇದರ ತೀರ್ಪುನ್ನೂ ಸಹ ಸರ್ವೋಚ್ಛ ನ್ಯಾಯಾಲಯ ಕಾಯ್ದಿರಿಸಿದೆ.

ABOUT THE AUTHOR

...view details