ಕರ್ನಾಟಕ

karnataka

ETV Bharat / briefs

ಕೊರೊನಾ ಪತ್ತೆ: ಕಾಡನಕೊಪ್ಪ ಗ್ರಾಮ ಸ್ಯಾನಿಟೈಸ್​​​​ - ಧಾರವಾಡ ಕೊರೊನಾ ವೈರಸ್ ಪ್ರಕರಣಗಳು

ಕಾಡನಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ‌ಮಾಡಲಾಯಿತು.

Sanitizer spray in Kadanakoppa village
Sanitizer spray in Kadanakoppa village

By

Published : Jun 29, 2020, 5:12 PM IST

ಕಲಘಟಗಿ:ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ‌ಮಾಡಲಾಯಿತು.

ಗ್ರಾಮದ 46 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​​ನಲ್ಲಿ‌ ದಾಖಲಿಸಲಾಗಿದೆ. ಸೋಂಕಿತನ ‌ಮನೆಯ ಓಣಿಯನ್ನು ಈಗಾಗಲೇ ಸೀಲ್​ ಡೌನ್ ಮಾಡಲಾಗಿದ್ದು, ಸೋಂಕಿತನ ಟ್ರಾವೆಲ್ ಹಿಸ್ಟರಿ‌ ಬಿಡುಗಡೆ ‌ಮಾಡಬೇಕಿದೆ.

ಗ್ರಾಮ ಪಂಚಾಯತ್​​ ಸಿಬ್ಬಂದಿ ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣ ‌ಸಿಂಪಡಣೆ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ‌ಕೈಗೊಂಡಿದ್ದಾರೆ.

ABOUT THE AUTHOR

...view details