ಕರ್ನಾಟಕ

karnataka

ETV Bharat / briefs

ಮತ್ತೆ ಮೂಡಲಿದೆ ಜಯ'ಸೂರ್ಯ': ಕೋಚ್​ ಆಗಿ ಕ್ರಿಕೆಟ್​ ಲೋಕಕ್ಕೆ ಆಗಮಿಸಿದ ಶ್ರೀಲಂಕಾ ದಿಗ್ಗಜ - ಶ್ರೀಲಂಕಾ ಕ್ರಿಕೆಟ್​ ಆಟಗಾರ

ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಮತ್ತೆ ಕ್ರಿಕೆಟ್‌ ಚಟುವಟಿಕೆಗಳಿಗೆ ಮರಳಲು ಸಜ್ಜಾಗಿದ್ದಾರೆ. ಮೆಲ್ಬರ್ನ್‌ನ ಮಲ್‌ಗ್ರೇವ್ ತಂಡಕ್ಕೆ ತರಬೇತುದಾರರಾಗುವ ಮೂಲಕ ಅವರು ಆಗಮಿಸಲಿದ್ದಾರೆ.

ಸನತ್​ ಜಯಸೂರ್ಯ
ಸನತ್​ ಜಯಸೂರ್ಯ

By

Published : Jun 4, 2021, 10:45 PM IST

ನವದೆಹಲಿ:ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ವಿಧಿಸಿದ್ದ ನಿಷೇಧ ಶಿಕ್ಷೆ ಅಂತ್ಯಗೊಂಡಿದ್ದು, ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಮತ್ತೆ ಕ್ರಿಕೆಟ್​ ಲೋಕಕ್ಕೆ ಕಾಲಿಡಲಿದ್ದಾರೆ.

ಮೆಲ್ಬರ್ನ್‌ನ ಮಲ್‌ಗ್ರೇವ್ ತಂಡಕ್ಕೆ ತರಬೇತುದಾರರಾಗುವ ಮೂಲಕ ಕ್ರಿಕೆಟ್‌ ಚಟುವಟಿಕೆಗಳಿಗೆ ಮರಳಲು ಸಜ್ಜಾಗಿದ್ದಾರೆ.

2019ರ ಫೆಬ್ರವರಿಯಲ್ಲಿ ಐಸಿಸಿಯ ಭ್ರಷ್ಟಾಚಾರ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಜಯಸೂರ್ಯ ಮೇಲೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಇದೀಗ ಜಯಸೂರ್ಯ ಅವರನ್ನು ಕೋಚ್ ಹುದ್ದೆಗೆ ವಹಿಸಿಕೊಳ್ಳುವಂತೆ ಶ್ರೀಲಂಕಾ ತಂಡದ ಮಾಜಿ ಆಟಗಾರ ತಿಲಕರತ್ನೆ ದಿಲ್ಶಾನ್ ಮನವೊಲಿಸಿದ್ದಾರೆ ಎಂದು ‘ಹೆರಾಲ್ಡ್ ಸನ್’ ಪತ್ರಿಕೆ ವರದಿ ಮಾಡಿದೆ.

ದಿಲ್‌ಶಾನ್‌ ಹಾಗೂ ಶ್ರೀಲಂಕಾದ ಮತ್ತೊಬ್ಬ ಮಾಜಿ ಆಟಗಾರ ಉಪುಲ್ ತರಂಗ ಅವರು ಮಲ್‌ಗ್ರೇವ್ ತಂಡದ ಪರ ಆಡಲಿದ್ದಾರೆ.

ABOUT THE AUTHOR

...view details