ಕರ್ನಾಟಕ

karnataka

8 ಎನ್ಎಂ ಆರ್​ಎಫ್​ ಚಿಪ್ ಪ್ರಕ್ರಿಯೆ ತಂತ್ರಜ್ಞಾನದಲ್ಲಿ Samsung​

By

Published : Jun 10, 2021, 3:23 PM IST

ಸ್ಯಾಮ್​ಸಂಗ್​ ಎಲೆಕ್ಟ್ರಾನಿಕ್ಸ್ ರೇಡಿಯೊ ಫ್ರೀಕ್ವೆನ್ಸಿ (ಆರ್​ಎಫ್​) ಚಿಪ್​​​​ಗಳಿಗಾಗಿ 8-ನ್ಯಾನೊಮೀಟರ್ (ಎನ್ಎಂ) ಪ್ರಕ್ರಿಯೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. 8 ಎನ್ಎಂ ಪ್ರಕ್ರಿಯೆಯು ವಿದ್ಯುತ್ ದಕ್ಷತೆಯನ್ನು ಶೇಕಡಾ 35 ರಷ್ಟು ಸುಧಾರಿಸುತ್ತದೆ ಮತ್ತು 14 ಎನ್ಎಂ ಪ್ರಕ್ರಿಯೆಗೆ ಹೋಲಿಸಿದರೆ ಚಿಪ್ ಪ್ರದೇಶವನ್ನು ಶೇಕಡಾ 35 ರಷ್ಟು ಕಡಿಮೆ ಮಾಡುತ್ತದೆ.

samsung-develops-8nm-rf-chip-process-technology
samsung-develops-8nm-rf-chip-process-technology

ಸಿಯೋಲ್: 5 ಜಿ ಮೊಬೈಲ್ ಸೆಮಿಕಂಡಕ್ಟರ್‌ಗಳಿಗಾಗಿ ತನ್ನ ಫೌಂಡ್ರಿ ಸೇವೆಯನ್ನು ಹೆಚ್ಚಿಸುವ ಉದ್ದೇಶದಿಂದ ರೇಡಿಯೊ ಫ್ರೀಕ್ವೆನ್ಸಿ ಚಿಪ್‌ಗಳಿಗಾಗಿ 8-ನ್ಯಾನೊಮೀಟರ್ (ಎನ್‌ಎಂ) ಪ್ರಕ್ರಿಯೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಹೇಳಿದೆ.

ತನ್ನ 8 ಎನ್ಎಂ ಫೌಂಡ್ರಿ 5 ಜಿ ಸಿಂಗಲ್-ಚಿಪ್ ಆರ್​ಎಫ್ ಸೆಲ್ಯುಸನ್ನ ಸಬ್​​-6-ಗಿಗಾಹೆರ್ಟ್ಜ್ ಅನ್ನು ಮಿಲಿಮೀಟರ್ ತರಂಗ ವರ್ಣಪಟಲಕ್ಕೆ ತಲುಪಿಸುತ್ತದೆ ಎಂದು ಸ್ಯಾಮ್​ಸಂಗ್​ ಹೇಳಿದೆ. ಆರ್​ಎಫ್​ ಇಂಟಿಗ್ರೇಟೆಡ್ ಸರ್ಕ್ಯೂಟ್ ಎನ್ನುವುದು ರೇಡಿಯೊ ಫ್ರೀಕ್ವೆನ್ಸಿ ಸಿಗ್ನಲ್ ಸ್ವೀಕರಿಸುವಿಕೆ ಅಥವಾ ಪ್ರಸರಣ ಮತ್ತು ಮಾದರಿ ಚಿಪ್‌ಗೆ ಸಂಬಂಧಿಸಿದಂತೆ ಅನಲಾಗ್-ಡಿಜಿಟಲ್ ಪರಿವರ್ತನೆಗಾಗಿ ಬಳಸುವ ಅರೆವಾಹಕ ಉಪಕರಣವಾಗಿದೆ.

8 ಎನ್ಎಂ ಪ್ರಕ್ರಿಯೆಯು ವಿದ್ಯುತ್ ಬಳಕೆಯಲ್ಲಿ ಶೇಕಡಾ 35 ರಷ್ಟು ಸುಧಾರಿಸುತ್ತದೆ. ಮತ್ತು 14 ಎನ್ಎಂ ಪ್ರಕ್ರಿಯೆಗೆ ಹೋಲಿಸಿದರೆ ಚಿಪ್ ಪ್ರದೇಶವನ್ನು ಶೇಕಡಾ 35 ರಷ್ಟು ಕಡಿಮೆ ಮಾಡುತ್ತದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇನ್ನು ಪ್ರತಿರೋಧವನ್ನು ಕಡಿಮೆ ಮಾಡಲು, ಸ್ಯಾಮ್‌ಸಂಗ್ ಸ್ವಯಂ-ಅಭಿವೃದ್ಧಿ ಹೊಂದಿದ ಆರ್​​ಎಫ್ ಎಕ್ಸ್ಟ್ರೀಮ್ ಎಫ್‌ಇಟಿ ಸೆಮಿಕಂಡಕ್ಟರ್ ಸಾಧನವನ್ನು ಬಳಸಿದ್ದು, ಅದು ಎಲೆಕ್ಟ್ರಾನ್ ಚಲನೆ ಹೆಚ್ಚಿಸುತ್ತದೆ.

ಸ್ಯಾಮ್ಸಂಗ್ ತನ್ನ ಆರ್​ಎಫ್ ಫೌಂಡ್ರಿ ಸೇವೆಯನ್ನು ಮೊದಲು 28 ಎನ್ಎಂ ಪ್ರಕ್ರಿಯೆಯೊಂದಿಗೆ 2015 ರಲ್ಲಿ ಪ್ರಾರಂಭಿಸಿತು ಮತ್ತು ಅದನ್ನು 2017 ರಲ್ಲಿ 14 ಎನ್ಎಂ ಪ್ರಕ್ರಿಯೆಯೊಂದಿಗೆ ವಿಸ್ತರಣೆ ಮಾಡಿತ್ತು.

ಇದು, 2017 ರಿಂದ 500 ದಶಲಕ್ಷಕ್ಕೂ ಹೆಚ್ಚಿನ ಮೊಬೈಲ್ ಆರ್​ಎಫ್​ ಚಿಪ್‌ಗಳನ್ನು ಹೊರ ತಂದಿದೆ. ಮಾರುಕಟ್ಟೆ ಸಂಶೋಧಕ ಟ್ರೆಂಡ್‌ಫೋರ್ಸ್‌ನ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ ಆದಾಯದ ದೃಷ್ಟಿಯಿಂದ ಸ್ಯಾಮ್‌ಸಂಗ್ ಜಾಗತಿಕ ಫೌಂಡ್ರಿ ಮಾರುಕಟ್ಟೆಯಲ್ಲಿ ಶೇಕಡಾ 17 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ABOUT THE AUTHOR

...view details