ಲಖನೌ: ಏಳನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಇತ್ತ ಚುನಾವಣೋತ್ತರ ಫಲಿತಾಂಶಗಳು ಹೊರ ಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಅಖಿಲೇಶ್ - ಮಾಯಾವತಿ ಮೈತ್ರಿಕೂಟಕ್ಕೆ ಭಾರಿ ಬೂಸ್ಟ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಮಹತ್ವದ ಸಭೆ ನಡೆಸಿದ್ದಾರೆ.
ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಇಬ್ಬರು ನಾಯಕರ ಭೇಟಿಯೂ ತೀವ್ರ ಕುತೂಹಲ ಕೆರಳಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನಾಯಕರನ್ನು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಹಾಘಟಬಂಧನ್ ಇಲ್ಲವೇ ತೃತೀಯ ರಂಗ ರಚನೆಗೆ ಮಾತುಕತೆ ನಡೆಸಿದ್ದರು.
ಆದರೆ, 7ನೇ ಹಂತದ ಹಾಗೂ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾದ ಚುನಾವಣೋತ್ತರ ಫಲಿತಾಂಶ ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಹಿನ್ನಡೆಯನ್ನು ಸೂಚಿಸಿವೆ. ಇದು ಮಹಾಘಟಬಂಧನ್ ಸಂಚಾಲಕನಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದೂ ಹೇಳಲಾಗುತ್ತಿದೆ.