ನವದೆಹಲಿ:ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ 1984ರ ಸಿಖ್ ವಿರೋಧಿ ದಂಗೆ ಬಗೆಗಿನ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.
ಸಿಖ್ ದಂಗೆ ಆಗಿದ್ದು ಆಗಿಹೋಯಿತು ಎನ್ನುವ ಸ್ಯಾಮ್ ಪಿತ್ರೋಡಾರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಯಾಮ್ ಪಿತ್ರೋಡಾ ಕ್ಷಮೆ ಕೇಳಿದ್ದಾರೆ.
ಹೆಚ್ಚಿನ ಓದಿಗಾಗಿ:
ಸಿಖ್ ವಿರೋಧಿ ದಂಗೆ ಬಗ್ಗೆ ಪಿತ್ರೋಡಾ ವಿವಾದಿತ ಹೇಳಿಕೆ: ಕೈ ನಾಯಕನ ವಿರುದ್ಧ ಬಿಜೆಪಿ ಕೆಂಡ
ನನ್ನ ಉದ್ದೇಶ ಅದಾಗಿರಲಿಲ್ಲ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂದುವರೆಯೋಣ ಎನ್ನುವ ಅರ್ಥದಲ್ಲಿ ಹೇಳಿದ್ದಾಗಿತ್ತು ಎಂದು ಪಿತ್ರೋಡಾ ಸ್ಪಷ್ಟನೆ ನೀಡಿದ್ದಾರೆ.
ಜೋ ಹುವಾ ತೋ ಬುರಾ ಹುವಾ( ಆಗಿದ್ದು ಕೆಟ್ಟ ಘಟನೆ) ಎನ್ನುವುದನ್ನು ಹೇಳಬೇಕಿತ್ತು. ನನಗೆ ಹಿಂದಿ ಅಷ್ಟಾಗಿ ಬರದ ಪರಿಣಾಮ ಬುರಾ(ಕೆಟ್ಟ) ಎನ್ನುವ ಪದವನ್ನು ಮರೆತೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.