ಕರ್ನಾಟಕ

karnataka

ETV Bharat / briefs

ಗೋಡ್ಸೆ ದೇಶಭಕ್ತ ಹೇಳಿಕೆ: ಕ್ಷಮೆಯಾಚಿಸಿದ ಸಾಧ್ವಿ, ಗಾಂಧಿ ಕೊಡುಗೆ ಅಪಾರವೆಂದ ಬಿಜೆಪಿ ಅಭ್ಯರ್ಥಿ - ಭೋಪಾಲ್​

ಮಹಾತ್ಮಾ ಗಾಂಧೀಜಿ ಹತ್ಯೆ ಮಾಡಿದ್ದ ನಾಥುರಾಮ್​ ಗೋಡ್ಸೆ ದೇಶಭಕ್ತ ಎಂದು ಸಾಧ್ವಿ ಹೇಳಿಕೆ ನೀಡುತ್ತಿದ್ದಂತೆ ವಿವಾದ ರೂಪ ಪಡೆದುಕೊಂಡಿತ್ತು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚನೆ ಮಾಡಲು ಬಿಜೆಪಿ ಸೂಚನೆ ನೀಡಿತ್ತು.

ಸಾಧ್ವಿ ಸಿಂಗ್​

By

Published : May 16, 2019, 9:24 PM IST

Updated : May 16, 2019, 10:12 PM IST

ಭೋಪಾಲ್​:ನಟ, ರಾಜಕಾರಣಿ ಕಮಲನಾಥ್​​ ನೀಡಿದ್ದ ನಾಥುರಾಮ್​ ಗೋಡ್ಸೆ ಹಿಂದೂ ಉಗ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್​ ಪಕ್ಷದ ಆದೇಶದಂತೆ ಕ್ಷಮೆಯಾಚನೆ ಮಾಡಿದ್ದಾರೆ.

ಕ್ಷಮೆಯಾಚನೆ ಮಾಡಿದ ಸಾಧ್ವಿ

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಧ್ವಿ ಅವರು, ಪಕ್ಷದ ನಿಲವೇ ತಮ್ಮ ಅಭಿಪ್ರಾಯ ಎಂದಿದ್ದಾರೆ.ಇದೇ ವೇಳೆ ನನ್ನ ಉದ್ದೇಶ ಯಾರಿಗೂ ನೋವ ಮಾಡುವುದು ಆಗಿರಲಿಲ್ಲ. ಅದು ನನ್ನ ಸ್ವತಃ ಹೇಳಿಕೆಯಾಗಿದ್ದು, ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ಕ್ಷಮೆಯಾಚಿಸುವೆ. ಮಹಾತ್ಮಾ ಗಾಂಧಿ ದೇಶಕ್ಕೆ ನೀಡಿರುವ ಕೊಡುಗೆ ಮರೆಯಲು ಸಾಧ್ಯವಿಲ್ಲ. ಈ ಮುಂಚೆ ಹೇಳಿರುವ ನನ್ನ ಹೇಳಿಕೆನ್ನ ತಿರುಚಲಾಗಿದೆ ಎಂದು ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿ ಹತ್ಯೆ ಮಾಡಿದ್ದ ನಾಥುರಾಮ್​ ಗೋಡ್ಸೆ ಓರ್ವ ದೇಶಭಕ್ತ.ದೇಶಭಕ್ತರಾಗಿಯೇ ಉಳಿಯಲಿದ್ದಾರೆ ಎಂದು ಸಾಧ್ವಿ ಹೇಳಿಕೆ ನೀಡಿದ್ದರು. ಇದೇ ವಿಷಯವನ್ನಿಟ್ಟುಕೊಂಡು ವಿಪಕ್ಷಗಳು ಬಿಜೆಪಿ ಮೇಲೆ ಹರಿಹಾಯ್ದಿದ್ದವು.

ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಬಿಜೆಪಿ ಕ್ಷಮೆಯಾಚನೆ ಮಾಡುವಂತೆ ಸಾಧ್ವಿಗೆ ಸೂಚನೆ ನೀಡಿತ್ತು. ಅದರಂತೆ ಇದೀಗ ತಾವು ಪಕ್ಷದ ಕಾರ್ಯಕರ್ತೆಯಾಗಿದ್ದು, ಅವರ ಮಾತಿಗೆ ನಾನು ಬದ್ಧಳಾಗಿದ್ದೇನೆ ಎಂದಿದ್ದಾರೆ.

Last Updated : May 16, 2019, 10:12 PM IST

ABOUT THE AUTHOR

...view details