ಚಿಕ್ಕೋಡಿ:ತಾಲೂಕಿನ ಸದಲಗಾ ಪಟ್ಟಣದ ಪುರಸಭೆ 19 ನೇ ವಾರ್ಡ್ ಒಂದು ಸ್ಥಾನಕ್ಕೆ ನಾಳೆ ಮತದಾನ ನಡೆಯಲಿದೆ. ಉಪಚುನಾವಣೆಗೆ ಸಲ್ಲಿಸಿರುವ 7 ನಾಮಪತ್ರಗಳ ಪೈಕಿ 5 ನಾಮಪತ್ರಗಳನ್ನು ಹಿಂಪಡೆದಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ಚುನಾವಣಾ ಹಣಾಹಣಿ ನಡೆಯಲಿದೆ.
ರಂಗೇರಿದ ಸದಲಗಾ ಪುರಸಭೆಗೆ ಉಪಚುನಾವಣೆ : ಕೈ- ಕಮಲದ ನಡುವೆ ನೇರ ಹಣಾಹಣಿ - undefined
ಸದಲಗಾ ಪುರಸಭೆಗೆ ಮೇ 29 ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಚುನಾವಣೆಯಾಗಿದೆ.

ಸದಲಗಾ ಪುರಸಭೆ ಉಪಚುನಾವಣಾ ಮೇ 29 ಕ್ಕೆ
ಕಾಂಗ್ರೆಸ್ನಿಂದ ವಿಜಯಲಕ್ಷ್ಮೀ ಸಂತೋಷ್ ನವಲೆ ಹಾಗೂ ಬಿಜೆಪಿಯಿಂದ ಕಾವೇರಿ ಹೇಮಂತ ಶಿಂಗೆ ಕಣದಲ್ಲಿದ್ದಾರೆ. ಮೇ 29 ರಂದು ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿ ಮಹಿಳೆಗಾಗಿ ಮೀಸಲು ಹೊಂದಿದ ವಾರ್ಡ್ 19 ರಲ್ಲಿ 859 ಮತದಾರರಿದ್ದಾರೆ. ಒಂದು ಮತಗಟ್ಟೆಯನ್ನು ಸಿದ್ಧಪಡಿಸಲಾಗಿದೆ. ಪುರಸಭೆ ಕಾಂಗ್ರೆಸ್ ಸದಸ್ಯರಾಗಿದ್ದ ಶೋಭಾ ನವಲೆ ನಿಧನರಾದ ನಂತರ ತೆರವುಗೊಂಡ ಸ್ಥಾನಕ್ಕಾಗಿ ಉಪಚುನಾವಣೆ ನಡೆಯುತ್ತಿದೆ.