ಇಸ್ಲಾಮಾಬಾದ್( ಪಾಕಿಸ್ತಾನ): ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಪಾಕಿಸ್ತಾನ ಮತ್ತು ರಷ್ಯಾದ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊದಲ ಬಾರಿಗೆ ಇಸ್ಲಾಮಾಬಾದ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ.
ಈ ಹಿಂದೆ ಉತ್ತರ - ದಕ್ಷಿಣ ಅನಿಲ ಪೈಪ್‌ಲೈನ್ ಎಂದು ಹೆಸರಿಸಲಾಗಿದ್ದ ಈ ಯೋಜನೆಗೆ ಈಗ ಪಾಕಿಸ್ತಾನ ಸ್ಟೀಮ್ ಗ್ಯಾಸ್ ಪೈಪ್‌ಲೈನ್ ಎಂದು ಮರುನಾಮಕರಣ ಮಾಡಿದೆ. ಇದರಲ್ಲಿ ಪಾಕಿಸ್ತಾನದ ಕರಾಚಿ ನಗರದಿಂದ ಕಸೂರ್‌ಗೆ ಅನಿಲ ಪೈಪ್‌ಲೈನ್ ಹಾಕಲಾಗಿದೆ. ಇದು ಉಭಯ ದೇಶಗಳ ನಡುವಿನ ಪ್ರಮುಖ ಯೋಜನೆಯಾಗಿದೆ.