ಬ್ರಿಸ್ಟೋಲ್: ಭಾರತ ತಂಡವನ್ನೇ ಕೇವಲ 179ರನ್ಗಳಿಗೆ ಆಲೌಟ್ ಮಾಡಿದ್ದ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿದ್ದ ವಿಂಡೀಸ್ ತಂಡ 421 ರನ್ಗಳ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ವಿಶ್ವಕಪ್ ಗೆಲುವಿನ ಆಸೆಯಲ್ಲಿರುವ ಬಲಿಷ್ಠ ತಂಡಗಳಿಗೆ ಎಚ್ಚರಿಕೆ ನೀಡಿದೆ.
ಭಾರತದಂತಹ ಬಲಿಷ್ಠ ತಂಡವನ್ನೇ ತನ್ನ ಮೊದಲ ಪಂದ್ಯದಲ್ಲಿ ಕೇವಲ 179 ರನ್ಗಳಿಗೆ ನಿಯಂತ್ರಿಸಿದ್ದ ನ್ಯೂಜಿಲ್ಯಾಂಡ್ ಬೌಲರ್ಗಳು ವಿಂಡೀಸ್ ವಿರುದ್ಧ ಅಸಹಾಯಕರಾದರು. ಬೌಲ್ಟ್ ಬಿಟ್ಟು ಉಳಿದ ಬೌಲರ್ಗಳನ್ನು ವಿಂಡೀಸ್ ಬ್ಯಾಟ್ಸ್ಮನ್ಗಳು ಮನಬಂದಂತೆ ದಂಡಿಸಿದರು. ಅದರಲ್ಲೂ ಮ್ಯಾಟ್ ಹೆನ್ರಿ 9 ಓವರ್ಗಳಲ್ಲಿ 109 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಐಪಿಎಲ್ ಆಟ ಮುಂದುವರಿಸಿದ ರಸೆಲ್, ಗೇಲ್
ಐಪಿಎಲ್ನಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದ ರಸೆಲ್ ಹಾಗೂ ಕ್ರಿಸ್ ಗೇಲ್ ನಿನ್ನೆಯ ಪಂದ್ಯದಲ್ಲೂ ಅದೇ ಆಟ ತೋರಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ರಿಸ್ಗೇಲ್ 22 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 35 ರನ್ಗಳಿಸಿದರೆ ರಸೆಲ್ ಕೇವಲ 25 ಎಸೆತಗಳಲ್ಲಿ 7 ಬೌಂಡಿರಿ ಹಾಗೂ 3 ಸಿಕ್ಸರ್ ಸಿಡಿಸಿ ಐಪಿಎಲ್ ಮಾದರಿಯಲ್ಲೇ ಬ್ಯಾಟ್ ಬೀಸಿದರು.
ಇವರಿಬ್ಬರ ಜೊತೆಗೆ ನಾಯಕ ಹೋಲ್ಡರ್ ಸಹಾ 32 ಎಸೆತಗಳಲ್ಲಿ ತಲಾ 3 ಬೌಂಡರಿ ಸಿಕ್ಸರ್ ಸಹಿತ 47 ರನ್ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಶೈ ಹೋಪ್ 84 ಎಸೆತಗಳಲ್ಲಿ 101 ರನ್ ಸಿಡಿಸಿ ವಿಂಡೀಸ್ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
422 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ 330 ರನ್ಗಳಿಗೆ ಆಲೌಟ್ ಆಗಿ 91 ರನ್ಗಳಿಂದ ಸೋಲೊಪ್ಪಿಕೊಂಡಿತು.