ಕರ್ನಾಟಕ

karnataka

ETV Bharat / briefs

ಬೆಂಗಳೂರಿನಲ್ಲಿ ರೂಬಿಕ್​​​ ಕ್ಯೂಬ್​​ ಗಿನ್ನಿಸ್​​ ವಿಶ್ವ ದಾಖಲೆ ಪ್ರಯತ್ನ - undefined

ವಿಶ್ವ ದಾಖಲೆಯ ಜೊತೆಗೆ ಅಳಿವಿನಂಚಿನಲ್ಲಿರುವ ಹುಲಿ ಸಂರಕ್ಷಣೆ ನಮ್ಮ ಉದ್ದೇಶ ಎಂದು ಸಾರಿ ಹೇಳುವ ಮೂಲಕ ಹೊಸ ಪ್ರಯತ್ನಕ್ಕೆ ಬೆಂಗಳೂರಿನ ಯುವ ಸಮುದಾಯ ಪ್ರಯತ್ನಿಸಿತು. ಸುಮಾರು 300 ಸ್ಪರ್ಧಿಗಳು ಸಾವಿರದ ಇನ್ನೂರು ರೂಬಿಕ್ ಕ್ಯೂಬ್ ಜೋಡಿಸುವ ಮೂಲಕ ಬೃಹದಾಕಾರದ ಹುಲಿಯ ಮುಖದ ಚಿತ್ರ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದರು.

ರೂಬಿಕ್ ಕ್ಯೂಬ್ ಗಿನ್ನಿಸ್ ವಿಶ್ವ ದಾಖಲೆ ಪ್ರಯತ್ನ

By

Published : May 7, 2019, 8:57 PM IST

ಬೆಂಗಳೂರು: ಪ್ರತಿಯೊಂದು ನಗರದಲ್ಲಿ ವಿಶ್ವ ದಾಖಲೆ ಪ್ರಯತ್ನಗಳು ಪ್ರತಿ ದಿನ ನಡೆಯುತ್ತಲೇ ಇರುತ್ತವೆ. ಇಂತಹ ಪ್ರಯತ್ನಕ್ಕೆ ಬೆಂಗಳೂರಿನ ಯುವ ಸಮುದಾಯ ಇಂದು ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಇನೋವೇಷನ್ ಮಾಲ್​ನಲ್ಲಿ ಕೈ ಹಾಕಿತ್ತು.

ಕೇವಲ ಗಿನ್ನಿಸ್ ದಾಖಲೆಯ ಪ್ರಯತ್ನವಲ್ಲದೆ ಹುಲಿ ಸಂರಕ್ಷಣೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸಿದರು. ಸುಮಾರು 300 ಸ್ಪರ್ಧಿಗಳು ಸಾವಿರದ ಇನ್ನೂರು ರೂಬಿಕ್ ಕ್ಯೂಬ್ ಜೋಡಿಸುವ ಮೂಲಕ ಬೃಹದಾಕಾರದ ಹುಲಿಯ ಮುಖದ ಚಿತ್ರ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು.

ರೂಬಿಕ್ ಕ್ಯೂಬ್ ಗಿನ್ನಿಸ್ ವಿಶ್ವ ದಾಖಲೆ ಪ್ರಯತ್ನ

ರೂಬಿಕ್ ಕ್ಯೂಬ್ ತರಬೇತುದಾರ ಹೊಸ ಕಲಾವಿದ ಪೃಥ್ವೀಶ್ ನೇತೃತ್ವದಲ್ಲಿ ಈ ಸಾಧನೆ ಮಾಡಲು 50ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಯುವಕರು ಉತ್ಸುಕರಾಗಿದ್ದರು. ತಮ್ಮ ಮೆದುಳು ಹಾಗೂ ಕಣ್ಣುಗಳ ಸಂಯೋಜನೆ ನೆರವಿನಿಂದ ರೂಬಿಕ್ ಕ್ಯೂಬ್​ಗಳನ್ನು ಕ್ಷಣಮಾತ್ರದಲ್ಲಿ ಜೋಡಿಸಿ ತಮ್ಮ ಯುಕ್ತಿಯ ಜೊತೆಗೆ ಶಕ್ತಿಯನ್ನು ಪ್ರದರ್ಶಿಸಿದರು.

For All Latest Updates

TAGGED:

ABOUT THE AUTHOR

...view details