ಕರ್ನಾಟಕ

karnataka

ETV Bharat / briefs

ಹೈದರಾಬಾದ್ ಮಣಿಸಿ ಅಂಕಪಟ್ಟಿಯಲ್ಲಿ ರಾಜಸ್ಥಾನ ಜಿಗಿತ... ಪ್ಲೇ ಆಫ್​ ಲೆಕ್ಕಾಚಾರ ಮತ್ತಷ್ಟು ರೋಚಕ! - ಪ್ಲೇಆಫ್

ಸನ್​ರೈಸರ್ಸ್​ ಹೈದರಾಬಾದ್ ಸೋಲಿಸಿದ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ​​ ಒಂದು ಸ್ಥಾನ ಏರಿಕೆಯಾಗಿ ಆರನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗಾಗಿ ಪ್ಲೇ ಆಫ್​ ಲೆಕ್ಕಾಚಾರಗಳು ಮತ್ತಷ್ಟು ರೋಚಕವಾಗಿದೆ.

ರಾಜಸ್ಥಾನ

By

Published : Apr 28, 2019, 1:30 AM IST

ಜೈಪುರ:ಸನ್​ರೈಸರ್ಸ್​ ಹೈದರಾಬಾದ್ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್​ ಏಳು ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್​ ನಿಗದಿತ 20 ಓವರ್​ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 160 ರನ್​​ ಗಳಿಸಿತು. ಡೇವಿಡ್ ವಾರ್ನರ್ (37) ಹಾಗೂ ಕನ್ನಡಿಗ ಮನೀಷ್ ಪಾಂಡೆ ಅಕರ್ಷಕ (61) ರನ್​​ ತಂಡಕ್ಕೆ ನೆರವಾಯಿತು.

ರಾಜಸ್ಥಾನ ಪರ ಮೈದಾನಕ್ಕಿಳಿದ ಎಲ್ಲ ಆಟಗಾರರೂ ಉತ್ತಮವಾಗಿ ಬ್ಯಾಟ್ ಬೀಸಿದರು. ರಹಾನೆ (39), ಲಿಯಾಮ್​ ಲಿವಿಂಗ್​​ಸ್ಟೋನ್​​ (44), ಸ್ಯಾಮ್ಸನ್​(48), ಸ್ಮಿತ್​​ (22) ರನ್​ಗಳಿಂದ ಅವಶ್ಯಕ ಗೆಲುವು ಸಾಧಿಸಿತು.

ರಾಜಸ್ಥಾನ ಪಂದ್ಯ ಗೆಲ್ಲುವುದರೊಂದಿಗೆ ಅಂಕಪಟ್ಟಿಯಲ್ಲಿ ಒಂದಷ್ಟು ಬದಲಾವಣೆ ಆಗಿವೆ. ರಾಜಸ್ಥಾನ ರಾಯಲ್ಸ್​​ ಒಂದು ಸ್ಥಾನ ಏರಿಕೆಯಾಗಿ ಆರನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗಾಗಿ ಪ್ಲೇ ಆಫ್​ ಲೆಕ್ಕಾಚಾರಗಳು ಮತ್ತಷ್ಟು ರೋಚಕವಾಗಿದೆ.

ABOUT THE AUTHOR

...view details