ಹೈದರಾಬಾದ್:ಪ್ರಸಕ್ತ ವರ್ಷದ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನೂತನ ದಾಖಲೆ ನಿರ್ಮಿಸಿದ್ದು, 4ನೇ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ. ವಿಶೇಷವೆಂದರೆ ನಿನ್ನೆಯ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲು ಮಾಡುತ್ತಿದ್ದಂತೆ ಮಗಳು ಸಮೀರಾ ಜತೆ ಸಂತಸದ ಕ್ಷಣಗಳನ್ನ ಕಳೆದಿದ್ದು, ಜತೆಗೆ ಹೆಂಡತಿ ರಿತಿಕಾ ಸಾಜ್ದೆ ಜೊತೆ ಮಾತನಾಡಿರುವುದು.
ಕೊನೆಯ ಓವರ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ದಾಖಲು ಮಾಡುತ್ತಿದ್ದಂತೆ ಪತ್ನಿ ರಿತಿಕಾ ಸಾಜ್ದೆ ಮಗಳು ಸಮೀರಾಳನ್ನ ಮೈದಾನಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗಳೊಂದಿಗೆ ರೋಹಿತ್ ಶರ್ಮಾ ಸಂತೋಷದಿಂದ ಕಾಲಕಳೆದಿದ್ದಾರೆ. ಕೆಲ ನಿಮಿಷಗಳ ಕಾಲ ಮಗಳೊಂದಿಗೆ ಕಾಲಹರಣ ಮಾಡಿರುವ ರೋಹಿತ್ ತಂದನಂತರ ತಂಡದ ಸಹ ಆಟಗಾರರರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.