ಬೆಂಗಳೂರು: ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಜಟಾಪಟಿ ದಿನನಿತ್ಯ ಹೊಸ ತಿರುವು ಪಡೆಯುತ್ತಿದೆ. ಇವರಿಬ್ಬರ ವಾಕ್ಸಮರದ ಮಧ್ಯೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪ್ರವೇಶಿಸಿದ್ದು, ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸುಮಲತಾ ಬಗ್ಗೆ ಕುಮಾರಸ್ವಾಮಿ ಈ ಕೃತ್ಯಕ್ಕೂ ಇಳಿದಿದ್ರಾ?: ರಾಕ್‌ಲೈನ್ ವೆಂಕಟೇಶ್ರಿಂದ ಗಂಭೀರ ಆರೋಪ - h d kumaraswamy and sumalatha
ನಾನು ಮತ್ತು ಸುಮಲತಾ ಅವರು ಹೊಟೇಲ್ ಕಾರಿಡಾರ್ನಲ್ಲಿ ಹೋಗುತ್ತಿರವ ದೃಶ್ಯಗಳನ್ನು ಸಿಸಿ ಕ್ಯಾಮೆರಾದಿಂದ ಪಡೆದು ಅದನ್ನು ದುರ್ಬಳಕೆ ಮಾಡಲು ಹೊರಟಿದ್ದರು ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆ.

2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನಾನು ಮತ್ತು ಸುಮಲತಾ ಅವರು ಹೊಟೇಲ್ ಕಾರಿಡಾರ್ನಲ್ಲಿ ಹೋಗುತ್ತಿರವುದರ ದೃಶ್ಯಗಳನ್ನು ಸಿಸಿ ಕ್ಯಾಮರಾದಿಂದ ಪಡೆದು ಅದನ್ನು ದುರ್ಬಳಕೆ ಮಾಡಲು ಹೊರಟಿದ್ದರು. ಅದಕ್ಕೆ ಅಶ್ಲೀಲ ಚಿತ್ರಗಳನ್ನು ಪೇಸ್ಟ್ ಮಾಡಿ ಸ್ಟೋರಿ ಮಾಡಲು ಯತ್ನಿಸಿದ್ದರು. ಅದನ್ನು ಚುನಾವಣೆ ವೇಳೆ ಅವರ ಚಾನಲ್‌ನಲ್ಲಿ ಬಿಡುಗಡೆ ಮಾಡಲು ಹೊರಟಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವಿಷಯವನ್ನು ಅವರ ಚಾನಲ್‌ನಲ್ಲಿ ಕೆಲಸಮಾಡುತ್ತಿದ್ದ ಅಂಬರೀಶ್ ಅಭಿಮಾನಿವೋರ್ವರು ನನಗೆ ಹೇಳಿದ್ದರು. ಈ ರೀತಿಯ ಕೆಟ್ಟ ಮನಸ್ಸು, ಕೆಟ್ಟ ಬುದ್ಧಿ ಕುಮಾರಸ್ವಾಮಿ ಹೊಂದಿದ್ದಾರೆ. ಆ ರೀತಿ ಮಾಡಿ ಸುಮಲತಾ ಹೆಸರಿಗೆ ಮಸಿ ಬಳಿಯಲು ಯತ್ನಿಸುವ ಕುತಂತ್ರ ಕೆಲಸ ಮಾಡಿದ್ದಾರೆ ಎಂದು ರಾಕ್‌ಲೈನ್ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.