ಬೆಂಗಳೂರು: ನಗರದ ಪ್ರಮುಖ ಸಿಗ್ನಲ್‌ಗಳಲ್ಲಿ ಕಳ್ಳರ ತಂಡವೊಂದು ಕಾರು ಚಾಲಕರಲ್ಲಿ ಭಿಕ್ಷೆ ಕೇಳುವ ನೆಪದಲ್ಲಿ ಕೈಚಳಕ ತೋರಿಸುತ್ತಿದೆ. ಚಾಲಕರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ವಸ್ತುಗಳನ್ನು ಎಗರಿಸಿ ಬಿಡುವ ಗ್ಯಾಂಗ್ ನಗರದಲ್ಲಿ ಸಕ್ರಿಯವಾಗಿದೆ.
ಭಿಕ್ಷೆ ಬೇಡುವ ನೆಪದಲ್ಲಿ ಕಳ್ಳರ ಕೈಚಳಕ... ಕಾರು ಚಾಲಕರೇ ಹುಷಾರ್!
ಬೆಂಗಳೂರಿನ ಪ್ರಮುಖ ಸಿಗ್ನಲ್‌ಗಳಲ್ಲಿ ಕಾರ್ ಚಾಲಕರ ಗಮನ ಬೇರೆಡೆ ಸೆಳೆದು ಬೆಲೆ ಬಾಳುವ ವಸ್ತುಗಳನ್ನು ಕದಿಯುವ ಕಳ್ಳರ ತಂಡವೊಂದು ನಗರದಲ್ಲಿ ಬೀಡುಬಿಟ್ಟಿದೆ. ಚಾಲಕರು ಡ್ರೈವಿಂಗ್ ಜತೆಗೆ ಸಿಗ್ನಲ್‌ಗಳಲ್ಲಿಯೂ ಎಚ್ಚರ ವಹಿಸಬೇಕಿದೆ
ಇದಕ್ಕೆ ನಿದರ್ಶನ ಎಂಬಂತೆ ನಗರದ ಸ್ಯಾಂಕಿ ರಸ್ತೆಯಲ್ಲಿ ಘಟನೆಯೊಂದು ಜರುಗಿದೆ. ಅಮರನಾಥ ಎಂಬುವರ ಕಾರ್ನ್ನು ನಾಲ್ಕು ಜನ ಸುತ್ತುವರಿದು ಬಿಕ್ಷೆ ಬಡುವ ರೀತಿ ಹಣ ಕೇಳಿದ್ದಾರೆ. ಅವರ ಗಮನ ಬೇರೆಕಡೆ ಹೋಗುತ್ತಿದ್ದಂತೆ ಉಳಿದವರು ಕಾರ್ನಲ್ಲಿದ್ದ ಐಫೋನ್ ಕದ್ದು ಪರಾರಿಯಾಗಿದ್ದಾರೆ.
ಅಲ್ಲದೇ ಹೊಸೂರು ರಸ್ತೆಯಲ್ಲಿಯೂ ಕಳ್ಳರು ಕೈಚಳಕ ತೋರಿಸಿದ್ದಾರೆ. ಕೈ-ಕಾಲು ಇಲ್ಲವೆಂದು ಅಥವಾ ಅಮಾಯಕರಂತೆ ಸಹಾಯ ಕೇಳುತ್ತಾರೆ. ಕಾರು ಚಾಲಕರು ಡ್ರೈವಿಂಗ್ ಎಚ್ಚರಿಕೆ ಜತೆಗೆ ಸಿಗ್ನಲ್‌ಗಳಲ್ಲಿಯೂ ಎಚ್ಚರ ವಹಿಸಬೇಕಿದೆ. ಇಲ್ಲವಾದರೆ ನಿಮ್ಮ ವಸ್ತುಗಳು ಕಳ್ಳತನವಾಗುವುದು ಗ್ಯಾರಂಟಿ. ಮೋಸ ಹೋದವರು ಸಾಮಾಜಿಕ ಜಾಲತಾಣಗಳ ಮೂಲಕ ನಗರ ಪೊಲೀಸ್ರಿಗೆ ದೂರು ನೀಡುತ್ತಿದ್ದಾರೆ.