ಕರ್ನಾಟಕ

karnataka

ETV Bharat / briefs

ಸರಕಾರ ನಮ್ಮನ್ನು ನೇಮಕಾತಿ ಮಾಡಬೇಕು : ಶಸ್ತ್ರ ಚಿಕಿತ್ಸಾ ಕೊಠಡಿ ತಂತ್ರಜ್ಞರ ಮನವಿ - ಉಡುಪಿ ಸುದ್ದಿ

ಕರ್ನಾಟಕ ಸರಕಾರವೇ ಸೃಷ್ಟಿಸಿರುವ ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಅನಸ್ತೇಶಿಯಾ ಟೆಕ್ನಾಲಜಿ, ಬಿಎಸ್ಸಿ , ಎಂಎಸ್ಸಿ ಕೋರ್ಸ್‌ಗಳನ್ನ ಪ್ರಾರಂಭಿಸಿದಾಗಿನಿಂದ ಐದರಿಂದ ಆರು ಸಾವಿರ ಅಭ್ಯರ್ಥಿಗಳು ಈ ಕೋರ್ಸ್ ಪಡೆದಿದ್ದಾರೆ..

ಉಡುಪಿ
ಉಡುಪಿ

By

Published : May 1, 2021, 10:31 PM IST

Updated : May 1, 2021, 10:43 PM IST

ಉಡುಪಿ :ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ನಮ್ಮನ್ನು ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಶಸ್ತ್ರ ಚಿಕಿತ್ಸಾ ಕೊಠಡಿ ತಂತ್ರಜ್ಞರು ಹೇಳಿದ್ದಾರೆ.

ಸರಕಾರ ನಮ್ಮನ್ನು ನೇಮಕಾತಿ ಮಾಡಬೇಕು : ಶಸ್ತ್ರ ಚಿಕಿತ್ಸಾ ಕೊಠಡಿ ತಂತ್ರಜ್ಞರ ಮನವಿ

ಕೊರೊನಾ ಸೋಂಕು ಹರಡುವ ಕಾರಣದಿಂದ ವೈದ್ಯರಿಗೆ ಮತ್ತು ರೋಗಿಗಳಿಗೆ ಸಹಾಯ ಮಾಡಲು ಕರ್ನಾಟಕ ರಾಜ್ಯ ಶಸ್ತ್ರಚಿಕಿತ್ಸಾ ಕೊಠಡಿಯ ತಂತ್ರಜ್ಞರ ಹುದ್ದೆಗಳನ್ನು ಎಲ್ಲಾ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ನೇಮಕಾತಿ‌ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸರಕಾರವೇ ಸೃಷ್ಟಿಸಿರುವ ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಅನಸ್ತೇಶಿಯಾ ಟೆಕ್ನಾಲಜಿ, ಬಿಎಸ್ಸಿ , ಎಂಎಸ್ಸಿ ಕೋರ್ಸ್‌ಗಳನ್ನ ಪ್ರಾರಂಭಿಸಿದಾಗಿನಿಂದ ಐದರಿಂದ ಆರು ಸಾವಿರ ಅಭ್ಯರ್ಥಿಗಳು ಈ ಕೋರ್ಸ್ ಪಡೆದಿದ್ದಾರೆ. ಜಿಲ್ಲೆಯಲ್ಲೂ ನೂರಾರು ಜನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ.

ಸದ್ಯ ನಾವು ಮಾಡಬೇಕಾದ ಕೆಲಸವನ್ನು ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರು ಮಾಡುತ್ತಿದ್ದು, ತಕ್ಷಣ ನಮ್ಮನ್ನು ನೇಮಕಾತಿ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

Last Updated : May 1, 2021, 10:43 PM IST

ABOUT THE AUTHOR

...view details