ಕರ್ನಾಟಕ

karnataka

ETV Bharat / briefs

BSYರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ: ಈಶ್ವರಪ್ಪಗೆ ರೇಣುಕಾ ಟಾಂಗ್ - ಈಶ್ವರಪ್ಪ ವಿರುದ್ಧ ಸ್ವಪಕ್ಷದ ರೇಣುಕಾಚಾರ್ಯ ಕಿಡಿ

ಯಡಿಯೂರಪ್ಪ ಅವರನ್ನು ರಾಜ್ಯಾದ್ಯಕ್ಷರಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ, ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ತಿರುಗಿ ಉಲ್ಟಾ ಹೊಡೆದ್ರಿ, ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನನ್ನನ್ನು ಯಡಿಯೂರಪ್ಪ ವಿರುದ್ದ ಎತ್ತಿಕಟ್ಟಲಿಲ್ವಾ ಎಂದು ಸಚಿವ ಈಶ್ವರಪ್ಪ ವಿರುದ್ಧ ಸ್ವಪಕ್ಷದ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

Renukacharya spark against KS Eshwarappa
Renukacharya spark against KS Eshwarappa

By

Published : Jun 9, 2021, 9:55 PM IST

Updated : Jun 9, 2021, 10:48 PM IST

ದಾವಣಗೆರೆ: ನಾನು ಯಾವುದೇ ವೇಷದಾರಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಈಶ್ವರಪ್ಪರಿಗೆ ತಿರುಗೇಟು ನೀಡಿದ್ದಾರೆ. ರೇಣುಕಾಚಾರ್ಯ ವೇಷಧಾರಿ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದರು.

ಈ ಸಂಬಂಧ ಮಾತನಾಡಿದ ಅವರು, ನನಗೆ ಹಿರಿಯರ ಬಗ್ಗೆ ಗೌರವ ಇದೆ. ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲ. ನನ್ನ ಬಗ್ಗೆ ಹುಲಿವೇಷ ಎಂದು ಹೇಳಿದವರು ಆತ್ಮವಾಲೋಕನ ಮಾಡಿಕೊಳ್ಳಲಿ.

ಈಶ್ವರಪ್ಪಗೆ ರೇಣುಕಾ ಟಾಂಗ್

ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ, ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ತಿರುಗಿ ಉಲ್ಟಾ ಹೊಡೆದ್ರಿ, ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನನ್ನನ್ನು ಯಡಿಯೂರಪ್ಪ ವಿರುದ್ದ ಎತ್ತಿಕಟ್ಟಲಿಲ್ವಾ ಎಂದು ಅವರ ವಿರುದ್ಧವೇ ಹರಿಹಾಯ್ದರು. ನೀವು ಚುನಾವಣಾ ಪೂರ್ವದಲ್ಲಿ ಏನು ಮಾಡಿದ್ರೀ ಗೊತ್ತಿಲ್ವಾ, ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು ಎಂದ ಅವರು, ಶಾಸಕ ಅರವಿಂದ್ ಬೆಲ್ಲದ್ ವಿರುದ್ದ ಗುಡುಗಿದರು.

ಬೆಲ್ಲದ್ ಅವರೇ ನನ್ನ ಬಳಿ ಇರುವುದು 65 ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೋ ಪತ್ರ ಇರೋದು. ಯಾರು ಹಳೇ ಪತ್ರ ಎಂದು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡ್ತೀನಿ. ರಾಜ್ಯಾಧ್ಯಕ್ಷರು ಪಕ್ಷದಿಂದ ಕೊಡುವುದು ಬೇಡ ಎಂದು ಹೇಳಿದ್ದಾರೆ ಹಾಗಾಗಿ ಕೊಟ್ಟಿಲ್ಲ. ಹಡಗಿನಲ್ಲಿ ಕೂತವರು ತೂತು ಕೊರೆಯಬಾರದು. ಅವರ ಜೊತೆ ಎಲ್ಲರೂ ಮುಳುಗುತ್ತಾರೆ ಎಂದು ಟಾಂಗ್ ನೀಡಿದರು.

Last Updated : Jun 9, 2021, 10:48 PM IST

ABOUT THE AUTHOR

...view details