ಕರ್ನಾಟಕ

karnataka

By

Published : May 10, 2021, 3:12 PM IST

Updated : May 10, 2021, 7:42 PM IST

ETV Bharat / briefs

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಬೆಡ್ ಪಡೆಯಲು ಅಧಿಕಾರಿಗಳ ನೇಮಕ : ಸಂಸದ ಪ್ರತಾಪ್ ಸಿಂಹ

37 ಖಾಸಗಿ ಆಸ್ಪತ್ರೆಗಳಲ್ಲಿ ನಮಗೆ ಶೇ.50 ರಷ್ಟು ಬೆಡ್​ಗಳನ್ನು ಕೊಡಬೇಕು. ಅಂದರೆ 2 ಸಾವಿರ ಬೆಡ್​ಗಳನ್ನು ನಮಗೆ ಕೊಡಬೇಕು. ಈಗ ಮನಗೆ ಸಿಗುತ್ತಿರುವ ಬೆಡ್​ಗಳು ಕೇವಲ 600 ರಿಂದ 700 ಬೆಡ್​ಗಳು ಮಾತ್ರ. ಕೆಲವು ಖಾಸಗಿ ಆಸ್ಪತ್ರೆಗಳು ಸರಿಯಾದ ಬೆಡ್ ಲೆಕ್ಕ ನೀಡುತ್ತಿಲ್ಲ.

Prathap Simha
Prathap Simha

ಮೈಸೂರು : ಖಾಸಗಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರಬೇಕಾದ ಬೆಡ್​ಗಳ ಬಗ್ಗೆ ಮಾಹಿತಿ ತಿಳಿಯಲು ಒಬ್ಬ ಆಡಳಿತಾಧಿಕಾರಿಯನ್ನು ಪ್ರತಿಯೊಂದು ಆಸ್ಪತ್ರೆಗೂ ನೇಮಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ತಡೆಗೆ ನೇಮಕವಾಗಿರುವ ಟಾಸ್ಕ್ ಫೋರ್ಸ್ ಅಧ್ಯಕ್ಷ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಜೊತೆ ಮಾತನಾಡಿ, ಮೈಸೂರಿನಲ್ಲಿ 5 ಮಂದಿಯ ಆಕ್ಸಿಜ‌ನ್ ಪೂರೈಕೆ ಮಾಡುವ ಏಜೆನ್ಸಿಗಳಿದ್ದು, ಪ್ರತಿಯೊಂದು ಏಜೆನ್ಸಿಯವರು ಎಷ್ಟು ಪ್ರಮಾಣದ ಆಕ್ಸಿಜನನ್ನು ತಯಾರು ಮಾಡುತ್ತಾರೆ. ಯಾವ ಏಜೆನ್ಸಿಯಿಂದ ಎಷ್ಟು ಸಿಲೆಂಡರ್ ಸಿಗುತ್ತದೆ ಎಂಬುದನ್ನು ಲೆಕ್ಕ ತೆಗೆದುಕೊಳ್ಳಲಾಗಿದೆ ಎಂದರು.

ಸಂಸದ ಪ್ರತಾಪ್ ಸಿಂಹ

ಮೈಸೂರಿನ 37 ಖಾಸಗಿ ಆಸ್ಪತ್ರೆಗಳಲ್ಲಿ ನಮಗೆ ಶೇ.50 ರಷ್ಟು ಬೆಡ್​ಗಳನ್ನು ಕೊಡಬೇಕು. ಅಂದರೆ 2 ಸಾವಿರ ಬೆಡ್​ಗಳನ್ನು ನಮಗೆ ಕೊಡಬೇಕು. ಈಗ ಮನಗೆ ಸಿಗುತ್ತಿರುವ ಬೆಡ್​ಗಳು ಕೇವಲ 600 ರಿಂದ 700 ಬೆಡ್​ಗಳು ಮಾತ್ರ. ಕೆಲವು ಖಾಸಗಿ ಆಸ್ಪತ್ರೆಗಳು ಸರಿಯಾದ ಬೆಡ್ ಲೆಕ್ಕ ನೀಡುತ್ತಿಲ್ಲ.

ಇದನ್ನು ಸರಿಪಡಿಸಲು ಹಾಗೂ ಪ್ರತಿದಿನ ಖಾಸಗಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರಬೇಕಾದ ಬೆಡ್​ಗಳ ಲೆಕ್ಕವನ್ನು ತಿಳಿಯಲು ಒಬ್ಬೊಬ್ಬ ಅಧಿಕಾರಿಯನ್ನು ನೇಮಕ ಮಾಡಿ ನಮಗೆ ಬರಬೇಕಾದ ಶೇ.50 ರಷ್ಟು ಬೆಡ್‌ನ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಇಂದು ಬೆಡ್​ಗಳ ಆಧಾರದ ಮೇಲೆ ಎಷ್ಟು ಆಕ್ಸಿಜನ್ ಬೇಕು ಎಂಬ ಬಗ್ಗೆ ಇಂದು ಸಂಜೆ ಗೊತ್ತಾಗಲಿದ್ದು. ಪ್ರತಿ ದಿನ ಮೈಸೂರಿನ ಕೆ.ಆರ್ .ಆಸ್ಪತ್ರೆಗೆ 16 ರಿಂದ 18 ಕೆ.ಜಿ ಆಕ್ಸಿಜನ್ ಖರ್ಚಾಗುತ್ತದೆ. ಮೈಸೂರಿಗೆ ಅಂದಾಜು 20 ಕಿಲೊ ಆಕ್ಸಿಜನ್ ನೀಡಿದರೆ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಪರಿಸ್ಥಿತಿಯನ್ನು ನಿಯಂತ್ರಿಸಬಹುದು.

ಇದರ ಜೊತೆಗೆ ಕೆಲವು ಖಾಸಗಿ ಆಸ್ಪತ್ರೆಗಳು ಕೊನೆ ಕ್ಷಣದಲ್ಲಿ ಆಕ್ಸಿಜನ್ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಕೂಡಲೇ 5-6 ಗಂಟೆ ಮುಂಚೆ ತಿಳಿಸಿದರೆ ಒಳ್ಳೆಯದು ಎಂದು ಹೇಳಿದರು.

Last Updated : May 10, 2021, 7:42 PM IST

ABOUT THE AUTHOR

...view details