ಬೆಂಗಳೂರು: ಮೊದಲ ಓವರ್ನಿಂದಲೇ ಕಳಪೆ ಫೀಲ್ಡಿಂಗ್ ಆರಂಭಿಸಿದ ಆರ್ಸಿಬಿ ಡೆಲ್ಲಿ ಯುವಕರ ಮುಂದೆ ಕೊನೆಗೂ ತಲೆಬಾಗಿ 4 ವಿಕೆಟ್ಗಳಿಂದ ಸೋಲನುಭವಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಆರನೇ ಸೋಲನುಭವಿಸಿದ 2ನೇ ತಂಡ ಎಂಬ ಕುಖ್ಯಾತಿಗೆ ಪಾತ್ರವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 149 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಕೊಹ್ಲಿ 41 ರನ್ಗಳಿಸಿದರೆ, ಮೊಯಿನ್ ಅಲಿ 32 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿದರು.
ಡೆಲ್ಲಿ ಕ್ಯಾಪಿಟಲ್ ಮಾರಕ ದಾಳಿ ನಡೆಸಿದ ಕಗಿಸೋ ರಬಡಾ 16 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಸಂದೀಪ್ ಲಾಮಿಚ್ಛಾನೆ ತಲಾ ಒಂದು ವಿಕೆಟ್ ಪಡೆದರು.
150 ರನ್ಗಳ ಸಾಧಾರಣ ಗುರಿ ಪಡೆದ ಡೆಲ್ಲಿ ಆರಂಭದಲ್ಲೇ ಧವನ್ ವಿಕೆಟ್ ಕಳಡದುಕೊಂಡರು, ನಾಯಕ ಶ್ರೇಯಸ್ ಅಯ್ಯರ್ 67, ಪೃಥ್ವಿ ಶಾ 28 ,ಇಂಗ್ರಾಮ್ 22 ಹಾಗೂ ರಿಷಭ್ 18 ರನ್ಗಳಿಸಿ ಗೆಲುವಿನ ದಡ ಸೇರಿಸಿದರು.
ನವದೀಪ್ ಸೈನಿ 2, ಸೌಥಿ, ಪವನ್ ನೇಗಿ ಹಾಗೂ ಮೊಯಿನ್ ಅಲಿ ತಲಾ ಒಂದು ವಿಕೆಟ್ ಪಡೆದರು.
ಮೊದಲ ಓವರ್ನಲ್ಲೇ ದುಬಾರಿ ಕ್ಯಾಚ್ ಕೈಚೆಲ್ಲಿದ ಪಾರ್ಥಿವ್ :
ಮೊದಲ ಓವರ್ನಲ್ಲೇ ಧವನ್ ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಆಘಾತ ಅನುಭವಿಸಿತ್ತು. ಅದೇ ಓವರ್ನ ಕೊನೆಯ ಎಸೆತದಲ್ಲೇ ಶ್ರೇಯಸ್ ಅಯ್ಯರ್ ಕೀಪರ್ ಪಾರ್ಥಿವ್ಗೆ ಕ್ಯಾಚ್ ನೀಡಿದ್ದರು. ಆದರೆ ಪಾರ್ಥಿವ್ ಕ್ಯಾಚ್ ಪಡೆಯುವಲ್ಲಿ ವಿಫಲರಾದರು. ನಂತರ 11 ನೇ ಓವರ್ನಲ್ಲಿ ಅಯ್ಯರ್ 42 ರನ್ಗಳಿಸಿದ್ದ ವೇಳೆ ಮತ್ತೆ ಪಾರ್ಥಿವ್ ಪಟೇಲ್ ಕ್ಯಾಚ್ ಕೈಚೆಲ್ಲಿ ಪಂದ್ಯದ ಸೋಲಿಗೆ ಕಾರಣರಾದರು.