ಬೆಂಗಳೂರು: ಇಡೀ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ರೋಚಕವಾಗಿದ್ದ ಆರ್ಸಿಬಿ - ಸಿಎಸ್ಕೆ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಗೆಲುವಿಗೆ ಬೇಕಿದ್ದ 26 ರನ್ಗಳಲ್ಲಿ ಧೋನಿ 24 ರನ್ಗಳಿಸಲಷ್ಟೇ ಶಕ್ತವಾಗಿ ಕೇವಲ ಒಂದು ರನ್ನಿಂದ ರೋಚಕ ಸೋಲನುಭಿವಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 20 ಓವರ್ಗಳಲ್ಲಿ 161 ರನ್ಗಳಿಸಿತ್ತು. ಆರಂಭಿಕ ಪಾರ್ಥಿವ್ ಪಟೇಲ್ 53 ರನ್ ಹಾಗೂ ಮೊಯಿನ್ ಅಲಿ 26, ಎಬಿಡಿ 25 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
162 ರನ್ಗಳ ಬೆನ್ನೆತ್ತಿದ ಸಿಎಸ್ಕೆ ಎಂಎಸ್ ಧೋನಿಯ ಏಕಾಂಗಿ ಹೋರಾಟದ ನೆರವಿನಿಂದ ಕೇವಲ 1 ರನ್ಗಳ ರೋಚಕ ಸೋಲುಕಂಡಿತು. ಎಂಎಸ್ ಧೋನಿ ಕೇವಲ 48 ಎಸೆತಗಳಲ್ಲಿ 5 ಬೌಂಡರಿ 7 ಸಿಕ್ಸರ್ ಸಿಡಿಸಿ 84 ರನ್ಗಳಿಸಿ ಔಟಾಗದೆ ಉಳಿದರು. ಧೋನಿಗೆ ಬೆಂಬಲ ನೀಡಿದ ರಾಯುಡು 29 ರನ್ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ಆರ್ಸಿಬಿ ಬೌಲರ್ಗಳ ಮುಂದೆ ನಿಲ್ಲಲಾರದಾದರು.
ಆರ್ಸಿಬಿ ಪರ ಡೇಲ್ ಸ್ಟೈನ್ 2, ಸೈನಿ 1, ಉಮೇಶ್ ಯಾದವ್ 2, ಚಹಾಲ್ 1ವಿಕೆಟ್ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.