ಕರ್ನಾಟಕ

karnataka

ETV Bharat / briefs

ಡಿಜಿಟಲ್​ ಪೇಮೆಂಟ್​ ವ್ಯವಸ್ಥೆ ಸುಧಾರಣೆಗೆ ಆರ್​​ಬಿಐ ಕ್ರಮ... ಈ ವಾರದಲ್ಲಿ ಮಹತ್ವದ ಸಭೆ

ಡಿಜಿಟಲ್ ಪೇಮೆಂಟ್​ ಹಾಗೂ ತಂತ್ರಜ್ಞಾನ ಆಧರಿತ ಹಣಕಾಸು ವ್ಯವಹಾರಗಳ ಸುರಕ್ಷತೆಗೆ ಆರ್​​ಬಿಐ ಕ್ರಮ. ಆಧಾರ್​ ಜನಕ ನಂದನ್​ ನಿಲೇಕಣಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಮಿತಿ ನೇಮಕ. ವಾರಾಂತ್ಯದಲ್ಲಿ ಮಹತ್ವದ ಸಭೆ ನಡೆಸಲಿರುವ ಆರ್​ಬಿಐ ಗವರ್ನರ್​​ ಶಕ್ತಿಕಾಂತ್​ ದಾಸ್.

ಆಧಾರ್​ ಜನಕ ನಂದನ್​ ನಿಲೇಕಣಿ

By

Published : Mar 25, 2019, 1:04 PM IST

ನವದೆಹಲಿ: ಪೇಮೆಂಟ್​ ಬ್ಯಾಂಕ್​ಗಳ ಮುಖ್ಯಸ್ಥರೊಂದಿಗೆ ಈ ವಾರಾಂತ್ಯದಲ್ಲಿ ಆರ್​ಬಿಐ ಗವರ್ನರ್​​ ಶಕ್ತಿಕಾಂತ್​ ದಾಸ್​ ಅವರು ಮಹತ್ವದ ಸಭೆ ನಡೆಸಲಿದ್ದಾರೆ. ಪೇಮೆಂಟ್​ ಬ್ಯಾಂಕ್​ಗಳ ಸಮಸ್ಯೆಗಳು ಹಾಗೂ ಅವುಗಳ ಕಾರ್ಯವೈಖರಿಗಳ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಆರ್​ಬಿಐ ಗವರ್ನರ್​ ಹೇಳಿದ್ದಾರೆ.

ಪ್ರಮುಖವಾಗಿ ಏಳು ಪೇಮೆಂಟ್​ ಬ್ಯಾಂಕ್​ಗಳ ಚಟುವಟಿಕೆಗಳ ಬಗ್ಗೆ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಡಿಜಿಟಟ್​ ಪೇಮೆಂಟ್​ ಅಥವಾ ಫಿನ್​ಟೆಕ್​ಗಳ ಬಗ್ಗೆ ಇನ್ನೆರಡು ತಿಂಗಳಲ್ಲಿ ಒಂದು ಗೈಡ್​​ಲೈನ್ಸ್​​ ಹಾಗೂ ಒಂದು ಸ್ಯಾಂಡರ್ಡ್​ ನಿಯಮಾವಳಿಗಳನ್ನ ಮಾಡಲಾಗುವುದು ಎಂದು ಇದೇ ವೇಳೆ ಕೇಂದ್ರ ಬ್ಯಾಂಕ್​ನ ಮುಖ್ಯಸ್ಥರು ತಿಳಿಸಿದ್ದಾರೆ.

ಏನಿದು ಸ್ಯಾಂಡ್​ ಬಾಕ್ಸ್​​:

ಬ್ಯಾಕಿಂಗ್​ ವ್ಯವಸ್ಥೆಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮುನ್ನ ಪ್ರಯೋಗ ಹಾಗೂ ಕಲಿಕೆಯನ್ನ ಕಡ್ಡಾಯವಾಗಿ ಮಾಡಬೇಕು ಹಾಗೂ ಪರೀಕ್ಷಿಸುವ ವಿಧಾನಕ್ಕೆ ಸ್ಯಾಂಡ್​ ಬಾಕ್ಸ್ ಎಂದು ಹೇಳಬಹುದಾಗಿದೆ. ಹೀಗೆ ಮಾಡುವುದರಿಂದ ಸಮಸ್ಯೆಯಿಂದ ದೂರ ಇರುವುದು ಹಾಗೂ ವೈಫಲ್ಯದಿಂದ ದೂರ ಇರುವುದಾಗಿದೆ.

ಡಿಜಿಟಲ್ ಪೇಮೆಂಟ್​ ಹಾಗೂ ತಂತ್ರಜ್ಞಾನ ಆಧರಿತ ಹಣಕಾಸು ವ್ಯವಹಾರಗಳ ಸುರಕ್ಷತೆ ಹಾಗೂ ಇನ್ನಿತರ ಚಟುವಟಿಕೆಗಳ ಮೇಲೆ ನಿಯಂತ್ರಣ ಮಾಡುವ ಸಲುವಾಗಿ ಆಧಾರ್​ ಜನಕ ನಂದನ್​ ನಿಲೇಕಣಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಮಿತಿಯನ್ನ ಈಗಾಗಲೇ ಆರ್​ಬಿಐ ನೇಮಕ ಮಾಡಿದೆ. ಮೂರು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.

For All Latest Updates

TAGGED:

Rbi.

ABOUT THE AUTHOR

...view details