ಬಸವಕಲ್ಯಾಣ: ಮದುವೆಯಾಗುವುದಾಗಿ ನಂಬಿಸಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಯನ್ನು ತಾಲೂಕಿನ ಮಂಠಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಸವಕಲ್ಯಾಣ: ಮದುವೆಯಾಗುವುದಾಗಿ ಪುಸಲಾಯಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ - ಬೀದರ್ ಜಿಲ್ಲೆ ಸುದ್ದಿ
16 ವರ್ಷದ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ 22ವರ್ಷದ ಯುವಕನನ್ನು ಮಂಠಾಳ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Cheating
ಪ್ರೀತಿಸಿದ್ದ ಬಾಲಕಿಯನ್ನು ಪುಸಲಾಯಿಸಿದ 22 ವರ್ಷದ ಯುವಕ ಕೆಲ ಬಾರಿ ಒತ್ತಾಯಪೂರ್ವಕವಾಗಿ ದೈಹಿಕ ಸಂಬಂಧ ನಡೆಸಿದ್ದಾನೆ. ಯುವಕನ ಸಹೋದರಿ ಹಾಗೂ ಆಕೆಯ ಪತಿಯೂ ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಯುವಕ ಮತ್ತು ಬಾಲಕಿ ಅನ್ಯ ಜಾತಿಗೆ ಸೇರಿದ್ದಾರೆ. ಆರೋಪಿ ಯುವಕ ಸೇರಿ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Last Updated : Aug 7, 2020, 4:52 PM IST