ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯದ ಸಂಗತಿ. ಅದರಲ್ಲೂ ಸೆಲೆಬ್ರಿಟಿಗಳಿಗಂತೂ ಇದು ಮಾಮೂಲಿಯಾಗಿ ಬಿಟ್ಟಿದೆ.
ದಯವಿಟ್ಟು ನನ್ನ ಪೇಜ್ ದೊರಕುವಂತೆ ಮಾಡಿ.. ಕನ್ನಡತಿಯ ಫೇಸ್‌ಬುಕ್ ಪೇಜ್ ಹ್ಯಾಕ್! - Ranjini Raghavan
ಕನ್ನಡತಿ ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಅವರ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ವಿಚಾರವನ್ನು ಸ್ವತಃ ರಂಜನಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಕಿರುತೆರೆ ಕಲಾವಿದರುಗಳಾದ ಅಶ್ವಿನಿ, ದೀಪಿಕಾ ದಾಸ್, ಭೂಮಿ ಶೆಟ್ಟಿ, ದೀಕ್ಷಿತ್ ಶೆಟ್ಟಿ ಅವರ ಸೋಷಿಯಲ್ ಮೀಡಿಯಾ ಹ್ಯಾಕ್ ಆಗಿತ್ತು. ಇದೀಗ ರಂಜನಿ ರಾಘವನ್ ಅವರ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದೆ.
ಕನ್ನಡತಿ ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಅವರ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ವಿಚಾರವನ್ನು ಸ್ವತಃ ರಂಜನಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ರಂಜನಿ ರಾಘವನ್ ನನ್ನ ಫೇಸ್‌ಬುಕ್ ಪೇಜ್ ಈ ವ್ಯಕ್ತಿಯಿಂದ ಹ್ಯಾಕ್ ಆಗಿದೆ. ದಯವಿಟ್ಟು ರಿಪೋರ್ಟ್ ಮಾಡಿ. ನನ್ನ ಪೇಜ್ ಮರಳಿ ದೊರಕುವಂತೆ ಮಾಡಿ" ಎಂದು ಹೇಳಿದ್ದಾರೆ.