ರಾಮನಗರ :ಜಿಲ್ಲೆಯಲ್ಲಿನ ಕೊರೊನಾ ನಿರ್ವಹಣೆ ಸಂಬಂಧ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಝೂಮ್ ಮೀಟಿಂಗ್ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಅವರು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ವಿವರ ಪಡೆದರು. ಈ ಸಭೆಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್‌ಗಳ ಪಿಡಿಒಗಳು ಭಾಗವಹಿಸಿದ್ದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು :
- ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟು ಜನ ಸೋಂಕಿತರಿದ್ದಾರೆ. ಎಷ್ಟು ಜನ ಹೋಂ ಐಸೋಲೇಟ್ ಆಗಿದ್ದಾರೆ. ಪಂಚಾಯತ್‌ನಿಂದ ಕೊರೋನಾ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ
- ಕೊರೊನಾ ಸೋಂಕಿತರಿಗೆ RTPCR, ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ ಆಗ್ತಿದೆಯೇ. ಡಿಸ್ಚಾರ್ಜ್ ಮಾಡೋಕೆ ಮುಂಚೆ ರಕ್ತ ಪರೀಕ್ಷೆ ನಡೆಸಲು ಸೂಚನೆ
- ರಾಮನಗರದಲ್ಲಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ್ ವ್ಯವಸ್ಥೆ ಕುರಿತು ಮಾಹಿತಿ.
- ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂಬ ಸೂಚನೆ
- ಗ್ರಾಮ ಪಂಚಾಯತ್‌ಗಳಲ್ಲಿ ಕೋವಿಡ್ ತುರ್ತು ನಿಧಿಯಲ್ಲಿ ಮತ್ತು 15ನೇ ಹಣಕಾಸಿನಲ್ಲಿ ನಿರ್ಗತಿಕರನ್ನ, ಕಡುಬಡವರನ್ನ ಗುರುತಿಸಿ ವಿಶೇಷ ಪ್ರಾತಿನಿಧ್ಯದ ಮೇಲೆ ಆಹಾರದ ಕಿಟ್ಗಳನ್ನ ನೀಡಬೇಕೆಂದು ಸೂಚನೆ