ಕರ್ನಾಟಕ

karnataka

ETV Bharat / briefs

ಬಸ್, ಬೈಕ್ ನಡುವೆ ಅಪಘಾತ: ಬೈಕ್​ ಸವಾರನಿಗೆ ಗಂಭೀರ ಗಾಯ - undefined

ಬೆಂಗಳೂರು-ಮೈಸೂರು ನಡುವೆ ಸಹಜವಾಗಿಯೇ ವಾಹನಗಳ ವೇಗ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರಸ್ತೆಉಬ್ಬುಗಳಿಂದ ವಾಹನ ಅಪಘಾತ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತ ನಡೆದ ಸ್ಥಳ

By

Published : Jun 15, 2019, 3:43 AM IST

ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ವಸತಿಗೃಹದ ಮುಂದೆ ನಡೆದ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲಾಧಿಕಾರಿ ವಸತಿಗೃಹದ ಮುಂದೆ ನಿರ್ಮಿಸುತ್ತಿದ್ದ ರಸ್ತೆಉಬ್ಬು ಕಾಮಗಾರಿ ಪ್ರಗತಿಯಲ್ಲಿದ್ದು ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದ ಉಂಟಾದ ಸಂಚಾರ ದಟ್ಟಣೆ

ಬೆಂಗಳೂರು-ಮೈಸೂರು ನಡುವೆ ಸಹಜವಾಗಿಯೇ ವಾಹನಗಳ ವೇಗ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರಸ್ತೆಉಬ್ಬುಗಳಿಂದ ವಾಹನ ಅಪಘಾತ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಉಬ್ಬು ಕಾಮಗಾರಿ ವೇಳೆ ಬ್ಯಾರಿಕೇಡ್ ಅಳವಡಿಸದೇ ಕೆಲಸಗಾರರು ಕಾಮಗಾರಿ ನಡೆಸುತ್ತಿದ್ದರು ಇದರಿಂದಾಗಿ ಅಪಘಾತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details