ಜಲೋರ್(ರಾಜಸ್ಥಾನ): ಇಲ್ಲಿನ ಜಲೋರ್ ಜಿಲ್ಲೆಯ ಲಾಚ್ಡಿ ಗ್ರಾಮದಲ್ಲಿ ಇಂದು ಮಗುವೊಂದು 90 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದೆ. ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ನಾಲ್ಕು ವರ್ಷದ ಬಾಲಕ ಅಜಯ್ ಎಂಬಾತ ತನ್ನ ತಂದೆಯ ಒಡೆತನದಲ್ಲಿರುವ ಕೃಷಿ ಭೂಮಿಯಲ್ಲಿ ಹೊಸದಾಗಿ ತೋಡಿದ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ತಕ್ಷಣದಲ್ಲಿ ಓಡಿ ಹೋದ ತಂದೆ ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಆದರೆ ಅದಾಗಲೇ ಆತ ಒಳಕ್ಕೆ ಹೋಗಿದ್ದ.