ಮುಂಬೈ: ಚುಟುಕು ಕ್ರಿಕೆಟ್ನ ಐತಿಹಾಸದಲ್ಲಿ 200 ಟಿ-20 ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ತಂಡ ಸೋಲು ಕಾಣುವ ಮೂಲಕ ಮುಖಭಂಗಕ್ಕೊಳಗಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬಳಕ 4 ವಿಕೆಟ್ಗಳ ಸೋಲು ಕಂಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡದ ಕ್ವಿಂಟನ್ ಡಿ ಕಾಕ್ (81) ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ (47) ರನ್‌ಗಳ ನೇರವಿನಿಂದ ಐದು ವಿಕೆಟ್ ನಷ್ಟಕ್ಕೆ 187 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಇದರ ಬೆನ್ನತ್ತಿದ್ದ ರಾಜಸ್ಥಾನ ತಂಡ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾದ ರಹಾನೆ(37) ಹಾಗೂ ಬಟ್ಲರ್(89) ತಂಡಕ್ಕೆ ಭದ್ರ ಬುನಾದಿ ಹಾಕಿದರು. 37 ರನ್ ಗಳಿಸಿದ್ದ ರಹಾನೆ ಕೃನಾಲ್ ಪಾಂಡ್ಯಾ ಓವರ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇದಾದ ಬಳಿಕ ಬಂದ ಸ್ಯಾಮ್ಸನ್(31) ರನ್ ಗಳಿಕೆ ಮಾಡಿ ಬಟ್ಲರ್ಗೆ ಸಾಥ್ ನೀಡಿದರು. ಹೀಗಾಗಿ ತಂಡ ಮೊದಲ 10 ಓವರ್ಗಳಲ್ಲಿ 100 ರನ್ ಗಳಿಕೆ ಮಾಡಿತು.
31 ರನ್ ಗಳಿಸಿದ್ದ ವೇಳೆ ಸ್ಯಾಮ್ಸನ್ ವಿಕೆಟ್ ಉರುಳುತ್ತಿದ್ದಂತೆ ರಾಜಸ್ಥಾನ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಾಹುಲ್ ತ್ರಿಪಾಠಿ(1), ಲಿಯಾಮ್(1), ಸ್ಮಿತ್(12) ರನ್ ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಆದರೆ ಕೊನೆಯದಾಗಿ ಕನ್ನಡಿಗ ಶ್ರೇಯಸ್ ಅಯ್ಯರ್ ಅಜೇಯ 13 ರನ್ ಗಳಿಕೆ ಮಾಡಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಹೀಗಾಗಿ ತಂಡ 19.3 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಇನ್ನು ಮುಂಬೈ ಪರ ಕೃನಾಲ್ ಮೂರು ವಿಕೆಟ್ ಪಡೆದರೆ, ಬುಮ್ರಾ 2 ವಿಕೆಟ್ ಕಬಳಿಸಿದರು. ಇನ್ನು ಟಿ-20 ಕ್ರಿಕೆಟ್ ಇತಿಹಾಸದಲ್ಲೇ 200 ಪಂದ್ಯಗಳನ್ನಾಡಿದ ಮೊದಲ ತಂಡವೆಂಬ ದಾಖಲೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ. ಜತೆಗೆ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ತಂಡವನ್ನ 100ನೇ ಸಲ ಮುನ್ನಡೆಸುತ್ತಿರುವ ದಾಖಲೆ ಬರೆದಿದ್ದಾರೆ.
ಚುಟುಕು ಕ್ರಿಕೆಟ್ನಲ್ಲಿ ಮುಂಬೈ ಇಂಡಿಯನ್ಸ್ 178 ಪಂದ್ಯ ಐಪಿಎಲ್ನಿಂದ ಹಾಗೂ ಚಾಂಪಿಯನ್ಸ್ ಲೀಗ್ನ ಟಿ-20ಯಲ್ಲಿ 22 ಪಂದ್ಯಗಳನ್ನ ಮುಂಬೈ ಇಂಡಿಯನ್ಸ್ ಆಡಿದೆ.