ಜೈಪುರ: 12 ನೇ ಆವೃತ್ತಿಯಲ್ಲಿ ಗೆಲುವನ್ನೇ ಕಾಣದ ಎರಡು ನತದೃಷ್ಟ ತಂಡಗಳಾದ ಆರ್ಸಿಬಿ ಹಾಗೂ ಆರ್ಆರ್ ಇಂದು ಜೈಪುರದಲ್ಲಿ ಕಣಕ್ಕಿಳಿಯುತ್ತಿದ್ದು, ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ಬೌಲಿಂಗ್ಆಯ್ದಕೊಂಡಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊನೆಯ ಓವರ್ನತನಕ ಪಂದ್ಯವನ್ನು ತೆಗೆದುಕೊಂಡು ಹೋಗಿದ್ದ ರಾಜಸ್ಥಾನ್ ಬ್ರಾವೋ ಎಸೆದ 20ನೇಓವರ್ನಲ್ಲಿ 12 ರನ್ಗಳಿಸಲಾಗದೆ 8 ರನ್ಗಳಿಂದ ಸೋಲನುಭವಿಸಿತ್ತು. ರಾಯಲ್ಸ್ ತಂಡ ಬೌಲಿಂಗ್ನಲ್ಲಿ ಬಲಿಷ್ಟವಾಗಿದ್ದರು ಬ್ಯಾಟಿಂಗ್ನಲ್ಲಿ ಮಾತ್ರ ಅಸ್ಥಿರ ಪ್ರದರ್ಶನ ಕಂಡುಬರುತ್ತಿದೆ. ಕಳೆದ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಈ ಸೀಸನ್ನಲ್ಲಿ ಮೊದಲ ಪಂದ್ಯದ ನಂತರ ವಿಫಲರಾಗುತ್ತಿರುವುದು ರಾಯಲ್ಸ್ಗೆ ತಲೆನೋವು ತಂದಿದೆ. ಒಟ್ಟಾರೆ ತನ್ನ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ಇಂದು ಆರ್ಸಿಬಿ ವಿರುದ್ಧ ಗೆಲುವು ಪಡೆಯುವ ವಿಶ್ವಾಸದಲ್ಲಿ ರಹಾನೆ ಪಡೆಯಿದೆ.