ಕರ್ನಾಟಕ

karnataka

ETV Bharat / briefs

ಜೂನ್ 20 ರಿಂದ ಕೊಡಗಿನಲ್ಲಿ ಮುಂಗಾರು ಚುರುಕು - undefined

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜೂನ್​ 20ರ ನಂರತ ಮುಂಗಾರಿ ಚುರುಕುಗೊಳ್ಳಲಿದೆ. ಸಾರ್ವಜನಿಕರು, ಪ್ರವಾಸಿಗರು ಯಾವುದೇ ಸಮಸ್ಯೆ ಸಂಬಂಧಿಸಿದಂತೆ ತುರ್ತು ನಂಬರ್​ಗೆ ಕರೆ ಮಾಡಲು ಜಿಲ್ಲಾಡಳಿತ ಸೂಚಿಸಿದೆ.

By

Published : Jun 15, 2019, 9:52 AM IST

ಕೊಡಗು: ಜೂನ್ 20ರ ನಂತರ ಮಂಜಿನ ನಗರಿ ಮಡಿಕೇರಿಯಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 20 ರ ನಂತರ ಎರಡು ವಾರಗಳು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಲಿದ್ದು. ಸಾರ್ವಜನಿಕರು ಹಾಗೂ‌ ಪ್ರವಾಸಿಗರ ಹಿತ ದೃಷ್ಟಿಯಿಂದ ಪ್ರಕೃತಿ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ 24/7 ಕಂಟ್ರೂಲ್ ರೂಂ 1077 (08272) ಅಥವಾ ವಾಟ್ಸ್ ಆ್ಯಪ್ ನಂಬರ್ 8550001077 ಸಂಪರ್ಕಿಸಲು ಕೊಡಗು ಜಿಲ್ಲಾಡಳಿತ ಸೂಚಿಸಿದೆ.

ಜಿಲ್ಲೆಯಲ್ಲಿ 5 ದಿನಗಳಿಂದ ಕರಾವಳಿ ಹಾಗೂ‌‌ ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುವ ಲಕ್ಷಣ ಕಾಣದಿದ್ದರೂ, ಒಳನಾಡು ಭಾಗದಲ್ಲಿ ಮಳೆ ಬೀಳುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

For All Latest Updates

TAGGED:

ABOUT THE AUTHOR

...view details