ಕರ್ನಾಟಕ

karnataka

ETV Bharat / briefs

ನೆಲಮಂಗಲದಲ್ಲಿ ಭಾರಿ ಮಳೆ: 20ಕ್ಕೂ ಹೆಚ್ಚು ತೋಟಗಳಿಗೆ ಹಾನಿ - undefined

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸುವನಹಳ್ಳಿ ಗ್ರಾಮದ ಸುಮಾರು 20ಕ್ಕೂ ಹೆಚ್ಚು ತೋಟಗಳಿಗೆ ಹಾನಿಯಾಗಿದೆ.

ಮಳೆಯ ಅವಾಂತರ

By

Published : Jun 8, 2019, 3:05 PM IST

ನೆಲಮಂಗಲ:ತಾಲೂಕಿನ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಮಳೆಯ ಆರ್ಭಟದಿಂದ ತೋಟಗಳಿಗೆ ನೀರು ನುಗ್ಗಿ 20ಕ್ಕೂ ಹೆಚ್ಚು ತೋಟಗಳಿಗೆ ಹಾನಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸುವನಹಳ್ಳಿ ಗ್ರಾಮದ ಸುಮಾರು 20ಕ್ಕೂ ಹೆಚ್ಚು ತೋಟಗಳಿಗೆ ಹಾನಿಯಾಗಿದೆ. ಮಳೆಯಿಂದ ಶೆಟ್ಟಾಳಪ್ಪ, ಹನುಮಂತರಾಯಪ್ಪ, ರಾಮಕೃಷ್ಣಯ್ಯ, ಆಂಜಿನಪ್ಪ, ಚಿಕ್ಕಹನುಮಯ್ಯ ಸೇರಿದಂತೆ ಇತರರ ತೋಟದ ಬೆಳೆಗಳು ಹಾನಿಯಾಗಿವೆ.

ಮಳೆಯ ಅವಾಂತರ

ಅಡಿಕೆ, ಬಾಳೆ, ಟೊಮ್ಯಾಟೋ, ಹುರುಳಿ, ಹೀರೇಕಾಯಿ ಬೆಳೆ ಸೇರಿದಂತೆ ಹಲವು ಬೆಳೆಗಳು ಮಳೆಗೆ ತುತ್ತಾಗಿವೆ. ಜೀವನಕ್ಕೆ ಅಧಾರವಾಗಿದ್ದ ಪ್ರಮುಖ ಬೆಳೆಗಳನ್ನು ಕಳಕೊಂಡ ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿ ಆಗಮಿಸದಿದ್ದಕ್ಕೆ ಗ್ರಾಮದ ರೈತರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕುಲುವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ‌ ಮರಗಳು ಬಿದ್ದ ಪರಿಣಾಮ ಗ್ರಾಮಗಳಲ್ಲಿ ನಿನ್ನೆ ರಾತ್ರಿಯಿಂದಲೂ ಪವರ್ ಕಟ್ ಆಗಿದೆ. ರಾತ್ರಿಯೆಲ್ಲ ಕತ್ತಲಲ್ಲಿ ಕಳೆಯುವಂತಾಯಿತು ಎಂದು ಗ್ರಾಮಸ್ಥರು ದೂರಿದ್ದಾರೆ.

For All Latest Updates

TAGGED:

ABOUT THE AUTHOR

...view details