ನವದೆಹಲಿ:ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ ಚಂದ್ರಕಾಂತ ಗೋಯಲ್ ಇಂದು ನಿಧನರಾಗಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್‌ಗೆ ಮಾತೃ ವಿಯೋಗ - ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್
ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ ಚಂದ್ರಕಾಂತ ಗೋಯಲ್ ಇಂದು ನಿಧನರಾಗಿದ್ದಾರೆ. ಇವರು ಮೂರು ಬಾರಿ ಮಹಾರಾಷ್ಟ್ರ ವಿಧಾನಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.
Goshal
ಈ ಸಂಬಂಧ ಭಾವನಾತ್ಮಕ ಟ್ವೀಟ್ ಮಾಡಿರುವ ಸಚಿವ ಗೋಯಲ್, ತಾಯಿ ನನಗೆ ಇಷ್ಟು ದಿನ ತೋರಿದ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರಿಂದು ತನ್ನನ್ನು ಬಿಟ್ಟು ದೂರ ಹೋಗಿದ್ದಾರೆ. ಅವರು ತಮ್ಮ ಇಡೀ ಜೀವನವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದರು. ಇತರರ ಸೇವೆ ಸಲ್ಲಿಸುವ ಮೂಲಕ ಹೇಗೆ ಜೀವನ ಸಾಗಿಸಬಹುದು ಎಂಬುದಕ್ಕೆ ಪ್ರೇರಣೆಯಾಗಿದ್ದರು. ದೇವರು ಅವರನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ.
ಚಂದ್ರಕಾಂತ ಗೋಯಲ್ ಅವರು ಮೂರು ಬಾರಿ ಮಹಾರಾಷ್ಟ್ರದ ಶಾಸಕಿಯಾಗಿದ್ದರು.
Last Updated : Jun 6, 2020, 10:18 AM IST