ಕರ್ನಾಟಕ

karnataka

ETV Bharat / briefs

ಕೊರೊನಾ ಕಟ್ಟಿ ಹಾಕಲು ನೈರುತ್ಯ ರೈಲ್ವೆ ಸಿದ್ಧ: ಮತ್ತೆ ಐಸೊಲೇಷನ್ ವಾರ್ಡ್​ಗಳಾದ ಕೋಚ್​ಗಳು..! - ಐಸೊಲೇಶನ್ ವಾರ್ಡ್​ಗಳಾಗಿ ಪರಿವರ್ತಿಸಲಾದ ರೈಲ್ವೆ ಬೋಗಿಗಳು

ಕೊರೊನಾ ಮೊದಲ‌ ಅಲೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲ್ವೇ ವರ್ಕ್​ಶಾಪ್​ನಲ್ಲಿ 96 ಕೋಚ್​ಗಳು ಸೇರಿದಂತೆ ಇಲಾಖೆಯ ವ್ಯಾಪ್ತಿಯಲ್ಲಿ 312 ಕೋಚ್​ಗಳನ್ನು ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು.

railway
railway

By

Published : Apr 26, 2021, 7:11 PM IST

Updated : Apr 26, 2021, 8:10 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಎರಡನೇ ಅಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ, ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇದಕ್ಕೆ ಬೆಂಬಲವಾಗಿ ರೈಲ್ವೆ ಇಲಾಖೆಯೂ ಸಹ ಕೈ ಜೋಡಿಸಿದ್ದು, ರೈಲ್ವೆ ಬೋಗಿಗಳನ್ನು ಇದೀಗ ಮತ್ತೆ ಐಸೊಲೇಷನ್ ವಾರ್ಡ್​ಗಳಾಗಿ ಪರಿವರ್ತಿಸಲಾಗುತ್ತಿದೆ.

ಐಸೊಲೇಷನ್ ವಾರ್ಡ್​ಗಳಾದ ಕೋಚ್​ಗಳು

ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡುತ್ತಿರುವಂತಹ ಮಹಾಮಾರಿ ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ದೇಶದ ಎಲ್ಲೆಡೆ ಯಾವುದೇ ರೀತಿಯಲ್ಲಿ ಕೊರೊನಾ ಕಾರ್ಮೋಡ ಪಸರಿಸಬಾರದು ಎಂಬ ಕಠಿಣ ಕ್ರಮಗಳನ್ನೂ ಸಹ ತೆಗೆದುಕೊಂಡಿದೆ. ಈ ಒಂದು ಮಹತ್ವದ ಕಾರ್ಯಕ್ಕೆ ರೈಲ್ವೆ ಇಲಾಖೆಯೂ ಹೊರತಾಗಿಲ್ಲ.

ಕೊರೊನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆ ದೃಷ್ಟಿಯಿಂದ ಸೌಥ್ ವೆಸ್ಟರ್ನ್‌ ರೈಲ್ವೇ ಸನ್ನದ್ಧವಾಗುತ್ತಿದೆ. ರಾಜ್ಯ ಹಾಗೂ ದೇಶದಲ್ಲಿನ ಆಸ್ಪತ್ರೆಗಳಲ್ಲಿ ಐಸೊಲೇಷನ್ ವಾರ್ಡ್​ಗಳ ಕೊರತೆ ನೀಗಿಸುವುದಕ್ಕೆ ರೈಲ್ವೇ ಕೋಚ್​ಗಳನ್ನು ಮತ್ತೆ ಐಸೊಲೇಶನ್ ವಾರ್ಡ್​ಗಳನ್ನಾಗಿ ಪರಿವರ್ತನೆ ಮಾಡುವ ಮೂಲಕ ರೈಲ್ವೇ ಇಲಾಖೆ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

ಐಸೊಲೇಷನ್ ವಾರ್ಡ್​ಗಳಾದ ರೈಲ್ವೆ ಬೋಗಿ

ಈ ಹಿಂದೆ ಕೊರೊನಾ ಮೊದಲ‌ ಅಲೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲ್ವೇ ವರ್ಕ್​ಶಾಪ್​ನಲ್ಲಿ 96 ಕೋಚ್​ಗಳು ಸೇರಿದಂತೆ ಇಲಾಖೆಯ ವ್ಯಾಪ್ತಿಯಲ್ಲಿ 312 ಕೋಚ್​ಗಳನ್ನು ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಅದೇ ರೀತಿ ಇದೀಗ ಮತ್ತೆ 280 ಕೋಚ್ ಗಳನ್ನು ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತನೆ ಮಾಡಿದೆ.

ಇನ್ನು ಪ್ರಮುಖವಾಗಿ ಸೌಥ್ ವೆಸ್ಟರ್ನ್‌ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಈ ಮೊದಲು 312 ರೈಲ್ವೇ ಕೋಚ್​ಗಳನ್ನು ಪರಿವರ್ತನೆ ಮಾಡಲಾಗಿತ್ತು. ಅಲ್ಲದೆ ಹುಬ್ಬಳ್ಳಿಯಲ್ಲಿ 96 ಕೋಚ್​ಗಳನ್ನ ಐಸೋಲೇಶನ್​ಗಳಾಗಿ ಮಾರ್ಪಾಡು ಮಾಡಲಾಗಿತ್ತು. ಆದರೆ, ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾಣದ ಹಿನ್ನೆಲೆಯಲ್ಲಿ ಯಾವುದೇ ಐಸೊಲೇಷನ್‌ ಕೋಚ್ ಚಿಕಿತ್ಸೆಗೆ ಬಳಕೆಯಾಗಿರಲಿಲ್ಲ.

ಐಸೊಲೇಷನ್ ವಾರ್ಡ್​ಗಳಾದ ರೈಲ್ವೆ ಬೋಗಿ

ಆದರೆ, ಇದೀಗ ಕೊರೊನಾ ಎರಡನೇ ಅಲೆಯು ಮತ್ತೆ ಅಪ್ಪಳಿಸಿದ್ದು, ರೈಲ್ವೇ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಮತ್ತೆ 280 ಕೋಚ್​ಗಳನ್ನು ಐಸೋಲೇಷನ್‌ ವಾರ್ಡ್​ಗಳನ್ನಾಗಿ ತಯಾರು ಮಾಡಿದೆ. ಒಂದು ಕೋಚ್​ನಲ್ಲಿ16 ಜನರಿಗೆ ಎಂಬಂತೆ ಇಲ್ಲಿ ಐಸೊಲೇಷನ್ ನೀಡುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಸೆಮಿ ಲಾಕ್​ಡೌನ್ ಮಾಡುವಂತೆ ಆವತ್ತು ಸಚಿವ ಸುಧಾಕರ್ ಹೇಳಿದಾಗ ಮಂತ್ರಿಗಳು ನಕ್ಕರು... ಇಂದು ರಾಜ್ಯವೇ ಅಳುತ್ತಿದೆ...!

ಒಟ್ಟಾರೆ ದೇಶಾದ್ಯಂತ ತನ್ನ ರೌದ್ರ ನರ್ತನ ನಡೆಸಿರುವ ಮಹಾಮಾರಿ ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೇ ಸೌಥ್ ವೆಸ್ಟರ್ನ್ ರೈಲ್ವೇ ಇಲಾಖೆಯೂ ಸಹ ಈ ಮಹಾಮಾರಿಯ ನಿಯಂತ್ರಣಕ್ಕೆ ರೈಲ್ವೇ ಕೋಚ್​ಗಳನ್ನು ಮತ್ತೆ ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸುವ ಮೂಲಕ ಮಹಾಮಾರಿಯ ನಿಯಂತ್ರಣಕ್ಕೆ ಪಣ ತೊಟ್ಟಿದ್ದು, ಜಿಲ್ಲಾಡಳಿತದಿಂದ ಬೇಡಿಕೆ ಬಂದ್ರೆ ಸೇವೆ ಒದಗಿಸಲು ಸನನ್ನದ್ದವಾಗಿವೆ.

Last Updated : Apr 26, 2021, 8:10 PM IST

ABOUT THE AUTHOR

...view details