ಕರ್ನಾಟಕ

karnataka

ETV Bharat / briefs

ಕೋಸ್ಟಲ್ ಅಗ್ರಿ ಇಂಡಸ್ಟ್ರೀಸ್​​ ಮೇಲೆ ದಾಳಿ: 7.81 ಲಕ್ಷ ರೂ. ಮೌಲ್ಯದ ಕೀಟನಾಶಕ ವಶ

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಕೋಸ್ಟಲ್ ಅಗ್ರಿ ಇಂಡಸ್ಟ್ರೀಸ್​ ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 7.81 ಲಕ್ಷ ಮೌಲ್ಯದ ಸುಮಾರು 200 ಲೀಟರ್ ದಾಸ್ತಾನು ಪತ್ತೆಯಾಗಿದೆ.

 Raid on Coastal Agri Industries: 7.81 lakh worth of pesticides seized
Raid on Coastal Agri Industries: 7.81 lakh worth of pesticides seized

By

Published : Jun 17, 2021, 8:57 PM IST

Updated : Jun 17, 2021, 9:04 PM IST

ಬೆಂಗಳೂರು: ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಜಾಗೃತ ಕೋಶ ರವರ ಮಾರ್ಗದರ್ಶನದಲ್ಲಿ ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ) ದಾಳಿ ನಡೆಸಿ, ಪರವಾನಗಿ ಇಲ್ಲದೆ ದಾಸ್ತಾನು ಇಟ್ಟಿದ್ದ ಕೀಟನಾಶಕಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಕೋಸ್ಟಲ್ ಅಗ್ರಿ ಇಂಡಸ್ಟ್ರೀಸ್​ ಮೇಲೆ ದಾಳಿ ನಡೆಸಿ, ಪರಿಶೀಲಿಸಿದಾಗ ತಯಾರಿಕಾ ಹಾಗೂ ಮಾರಾಟ ಪರವಾನಗಿ ಇಲ್ಲದೆ ಜೈವಿಕ ಕೀಟನಾಶಕಗಳಾದ ಬ್ಯಾಸಿಲಸ್ ಸಬ್ಟಿಲಸ್, ಬ್ಯಾಸಿಲಸ್ ತುರಿಂಜನ್ಸಿಸ್ ಹಾಗೂ ಜಿಬ್ಬರಿಲಿಕ್ ಆಸಿಡ್ ಗಳನ್ನು ಪ್ಯಾಕಿಂಗ್ ಮಾಡಿ ದಾಸ್ತಾನು ಮಾಡಲಾಗಿತ್ತು. ಸುಮಾರು 7.81 ಲಕ್ಷ ಮೌಲ್ಯದ 200 ಲೀಟರ್ ದಾಸ್ತಾನು ಪತ್ತೆಯಾಗಿದೆ.

ಎಲ್ಲ ಮಾದರಿಗಳನ್ನು ಸಂಗ್ರಹಿಸಿ ಮಾರಾಟ ತಡೆ ನೋಟಿಸ್ ಜಾರಿ ಮಾಡಲಾಗಿದೆ.

Last Updated : Jun 17, 2021, 9:04 PM IST

ABOUT THE AUTHOR

...view details