ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2020- 21ನೇ ಸಾಲಿನಲ್ಲಿ ವಿಧಿಸಿರುವ ಖರೀದಿ ದರವನ್ನು ಅತ್ಯಂತ ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ.
ಸರ್ಕಾರದ ಪರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಮಾತು ಕೇಳಿ ಬರುತ್ತಿದೆ.
ರಾಜ್ಯ ಸರ್ಕಾರ 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಭತ್ತದ ತಳಿಗಳಿಗೆ ಇದರ ವಿಧಿಸಿದ್ದು, ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,868 ರೂ. ನಿಗದಿಪಡಿಸಿದ್ದರೆ, ಗ್ರೇಟ್ ಹಕ್ಕಿಗೆ 1,888 ರೂ. ನಿಗದಿಪಡಿಸಲಾಗಿದೆ.
ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿರುವ ಮಾಹಿತಿಗೆ ಈ ವಿವರವನ್ನು ಸಚಿವರು ನೀಡಿದ್ದು, ಪ್ರಸ್ತುತ 12.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಆದೇಶಿಸಲಾಗಿದೆ.
ಈ ಪ್ರಮಾಣವನ್ನು 18.01 ಲಕ್ಷ ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. 2021 ರ ಮಾರ್ಚ್ 6 ಕ್ಕೆ ಇದ್ದಂತೆ 1,59,854.917 ಮೆಟ್ರಿಕ್ ಟನ್ ಬತ್ತವನ್ನು ರೈತರಿಂದ ಖರೀದಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.