ಮೊಹಾಲಿ:ಇಂಡಿಯನ್ ಪ್ರೀಮಿಯರ್ ಲೀಗ್ನ ಮತ್ತೊಂದು ಮಹತ್ವದ ಪಂದ್ಯ ಇಂದು ನಡೆಯಲಿದೆ. ಪಂಜಾಬ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಪ್ಲೇ ಆಫ್ ಹಂತಕ್ಕೇರುವ ದೃಷ್ಠಿಯಿಂದ ಈ ಪಂದ್ಯ ಎರಡೂ ಟೀಂಗೂ ಮಹತ್ವದಾಗಿದೆ.
ಎರಡೂ ತಂಡಗಳು ಈಗಾಗಲೇ 12 ಪಂದ್ಯಗಳನ್ನಾಡಿದ್ದು, ತಲಾ 10 ಅಂಕ ಗಳಿಸಿವೆ. ಮೊಹಾಲಿಯಲ್ಲಿ ಈಗಾಗಲೇ ಇತ್ತಂಡಗಳು ಆರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. ಕೋಲ್ಕತ್ತಾ ತಂಡ ರಸೆಲ್, ಕ್ರಿಸ್ ಲಿನ್ ಮೇಲೆ ಹೆಚ್ಚಿನ ಭರವಸೆಯಿಟ್ಟುಕೊಂಡಿದ್ದು, ಇತ್ತ ಪಂಜಾಬ್ ತಂಡ ಗೇಲ್ ಹಾಗೂ ರಾಹುಲ್ ಮೇಲೆ ಭಾರ ಹಾಕಿದೆ.
ಮುಂಬೈ ವಿರುದ್ದ ಈ ಹಿಂದಿನ ಪಂದ್ಯವನ್ನ ಕೋಲ್ಕತ್ತಾ 34 ರನ್ಗಳಿದ್ದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಹೈದರಾಬಾದ್ ವಿರುದ್ಧ ಪಂಜಾಬ್ 45 ರನ್ಗಳಿಂದ ಸೋಲು ಕಂಡು ಸ್ವಲ್ಪ ಹಿನ್ನಡೆಗೊಳಗಾಗಿದೆ. ಆದರೆ, ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ಮಾಡು ಇಲ್ಲವೇ ಮಡಿ ಸಂಕಷ್ಟಕ್ಕೊಳಗಾಗಿದ್ದು, ಗೆಲ್ಲುವ ತಂಡ ಪ್ಲೇ ಆಫ್ ಹಂತವನ್ನ ಜೀವಂತವಾಗಿಟ್ಟುಕೊಳ್ಳಲಿದೆ.
ಈಗಾಗಲೇ ಚೆನ್ನೈ, ಮುಂಬೈ ಹಾಗೂ ಡೆಲ್ಲಿ ತಂಡಗಳು ಪ್ಲೇ ಆಫ್ ಹಂತಕ್ಕೇರಿದ್ದು, ಉಳಿದ ಒಂದು ಸ್ಥಾನಕ್ಕೆ ಹೈದರಾಬಾದ್, ರಾಜಸ್ಥಾನ, ಕೋಲ್ಕತ್ತಾ ಹಾಗೂ ಪಂಜಾಬ್ ತಂಡ ಪೈಪೋಟಿ ನಡೆಸುತ್ತಿವೆ.