ಪುಣೆ(ಮಹಾರಾಷ್ಟ್ರ):ನಮಗೆ ಲಸಿಕೆಯ ಅಗತ್ಯವಿದೆ, ಹಾಗಾಗಿ 25 ಲಕ್ಷ ರೂ.ಗಳ ಲಸಿಕೆಯನ್ನು ಪೂರೈಸಿ ಎಂದು ಪುಣೆ ಮೇಯರ್ ಸೀರಮ್ ಇನ್ಸ್ಟಿಟ್ಯೂಟ್ನ ಸಿಇಒಗೆ ಪತ್ರ ಮುಖೇನ ಕೋರಿದ್ದಾರೆ.
'ನಮಗೆ ಲಸಿಕೆ ಅಗತ್ಯವಿದೆ, ಈ ಕೂಡಲೇ 25 ಲಕ್ಷ ವ್ಯಾಕ್ಸಿನ್ ಪೂರೈಸಿ': ಸೀರಂಮ್ಗೆ ಪುಣೆ ಮೇಯರ್ ಪತ್ರ - ಸೀರಮ್ ಇನ್ಸ್ಟಿಟ್ಯೂಟ್ನ ಸಿಇಒಗೆ ಪತ್ರ ಬರೆದ ಮೇಯರ್ ಮುರಳೀಧರ್ ಮೊಹೋಲ್
25 ಲಕ್ಷ ಲಸಿಕೆಗಳನ್ನು ಕೂಡಲೇ ಪೂರೈಸುವಂತೆ ಪುಣೆ ಮಹಾನಗರ ಪಾಲಿಕೆ ಮೇಯರ್ ಸೀರಂ ಇನ್ಸ್ಟಿಟ್ಯೂಟ್ಗೆ ಪತ್ರ ಬರೆದಿದ್ದಾರೆ. ಪುಣೆಯಲ್ಲಿ ಲಸಿಕೆಗಳ ಕೊರತೆಯಿಂದಾಗಿ, ಮಹಾನಗರ ಪಾಲಿಕೆಗೆ ಸೂಕ್ತ ಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಲಸಿಕೆಯನ್ನು ಸ್ವತಃ ಖರೀದಿಸಲು ನಿಗಮ ನಿರ್ಧರಿಸಿದೆ.
srm
'ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಪಡೆಯುತ್ತೇವೆ, ಆದರೆ ನೀವು ಈಗಿನಿಂದಲೇ ನಮಗೆ 25 ಲಕ್ಷ ಲಸಿಕೆಗಳನ್ನು ನೀಡಿ ಎಂದು ಮೇಯರ್ ಮುರಳೀಧರ್ ಮೊಹೋಲ್ ಹೇಳಿದ್ದಾರೆ.
ಪುಣೆಯಲ್ಲಿ ಲಸಿಕೆಗಳ ಕೊರತೆಯಿಂದಾಗಿ, ಮಹಾನಗರ ಪಾಲಿಕೆಗೆ ಸೂಕ್ತ ಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಲಸಿಕೆಯನ್ನು ಸ್ವತಃ ಖರೀದಿಸಲು ನಿಗಮ ನಿರ್ಧರಿಸಿದೆ. ಈ ಕುರಿತು ಸೀರಮ್ ಸಂಸ್ಥೆಯೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ.
TAGGED:
Pune Municipal Corporation