ಕರ್ನಾಟಕ

karnataka

ETV Bharat / briefs

ಔಟಾಗಿದ್ದರೂ ಆಟ ಮುಂದುವರಿಸಿದ್ದಕ್ಕೆ ತಮ್ಮ ಹೆಂಡತಿಯಿಂದಲೇ ಬೈಸಿಕೊಂಡಿದ್ರಂತೆ ಪೂಜಾರ! - ಚೇತೇಶ್ವರ್​ ಪೂಜಾರ

ಭಾರತ  ಟೆಸ್ಟ್​ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿರುವ ಪೂಜಾರ ಕರ್ನಾಟಕದ ವಿರುದ್ಧ ಮಾತ್ರ ಸೆಮಿಫೈನಲ್​ನಲ್ಲಿ ವಿಲನ್​ ಆಗಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಒಮ್ಮೆ ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 2 ಬಾರಿ ಕೀಪರ್​ಗೆ ಕ್ಯಾಚ್​ ನೀಡಿದ್ದರೂ, ಅಂಪೈರ್​ ಔಟ್​ ನೀಡಲಿಲ್ಲ ಎಂಬ ಕಾರಣಕ್ಕೆ ಕ್ರೀಸ್​ ತೊರೆಯದೇ ಆಟ ಮುಂದುವರಿಸಿ ಕನ್ನಡಿಗರ ಕೋಪಕ್ಕೆ ತುತ್ತಾಗಿದ್ದರು.

ಪೂಜಾರ

By

Published : Jun 10, 2019, 8:21 PM IST

ಮುಂಬೈ: 2018ರ ರಣಜಿ ಸೆಮಿಫೈನಲ್​ನಲ್ಲಿ ಮೂರು ಬಾರಿ ಕ್ಯಾಚ್​ ಔಟ್​ ಆಗಿದ್ದರು ಅಂಪೈರ್​ ಔಟ್​ ನೀಡಲಿಲ್ಲ ಎಂಬ ಕಾರಣಕ್ಕೆ ಕ್ರೀಸ್​ ತೊರೆಯದ ಪೂಜಾರರನ್ನ ಅವರ ಹೆಂಡತಿ ಬೈದಿದ್ದರೆಂಬ ಮಾಹಿತಿಯನ್ನು ಸ್ವತಃ ಚೇತೇಶ್ವರ್​ ಪೂಜಾರ ಬಹಿರಂಗಪಡಿಸಿದ್ದಾರೆ.

ಭಾರತ ಟೆಸ್ಟ್​ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿರುವ ಪೂಜಾರ ಕರ್ನಾಟಕದ ವಿರುದ್ಧ ಮಾತ್ರ ಸೆಮಿಫೈನಲ್​ನಲ್ಲಿ ವಿಲನ್​ ಆಗಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಒಮ್ಮೆ ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 2 ಬಾರಿ ಕೀಪರ್​ಗೆ ಕ್ಯಾಚ್​ ನೀಡಿದ್ದರೂ ಅಂಪೈರ್​ ಔಟ್​ ನೀಡಲಿಲ್ಲ ಎಂಬ ಕಾರಣಕ್ಕೆ ಕ್ರೀಸ್​ ತೊರೆಯದೇ ಆಟ ಮುಂದುವರಿಸಿದ್ದರು. ಪೂಜಾರ ಅವರ ಈ ನಡೆಗೆ ಇಡೀ ಕರ್ನಾಟಕವೇ ಪೂಜಾರರನ್ನು ಶಪಿಸಿತ್ತು. ಆದರೆ ತಮ್ಮ ಪತ್ನಿ ಪೂಜಾ ಕೂಡ ತಮ್ಮ ವಿರುದ್ಧ ಕೋಪಗೊಂಡಿದ್ದರು ಎಂದು ವಾಕ್​ ದ ಡಕ್​ ಕಾರ್ಯಕ್ರಮದಲ್ಲಿ ಪೂಜಾರ ತಿಳಿಸಿದ್ದಾರೆ.

ಮೊದಲ ಇನ್ನಿಂಗ್ಸ್​ ಮುಗಿದ ನಂತರ ಪೂಜಾರರನ್ನು ಅವರ ಪತ್ನಿ"ನೀವೊಬ್ಬ ರಾಷ್ಟ್ರೀಯ ಆಟಗಾರನಾಗಿದ್ದು, ಔಟಾದ ನಂತರ ಹೊರಬರಬೇಕಿತ್ತು" ಎಂದು ಬೈದಿದ್ದರಂತೆ. ನೀವು ಈ ರೀತಿ ಬೇರೆಯವರಗೆ ಮಾದರಿಯಾಗಬಾರದು ಎಂದಿದ್ದರಂತೆ. ಈ ಕುರಿತು ಪೂಜಾರ ಎಷ್ಟೇ ಸಮಜಾಯಿಸಿ ನೀಡಿದರು ಅವರ ಪತ್ನಿ ಮಾತ್ರ "ನಿನ್ನಿಂದ ನಾನು ಈ ರೀತಿಯ ನಡೆಯನ್ನು ನಿರೀಕ್ಷೆ ಮಾಡಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು ಎಂದು ಪೂಜಾರ ತಿಳಿಸಿದ್ದಾರೆ.

ಇನ್ನು ನೀವು ಏಕೆ ಅಂದು ಔಟಾಗಿದ್ದರೂ ಹೊರ ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪೂಜಾರ, "ನಾನು ಮಾತ್ರವಲ್ಲ ಆರಂಭಿಕ ಆಟಗಾರರು ವಿಕೆಟ್​ ನೀಡಿ ತಂಡ ಸೋಲಿನ ಸುಳಿಯಲ್ಲಿದ್ದಾಗ ಯಾವ ಆಟಗಾರನು ಹೊರ ನಡೆಯುವುದಿಲ್ಲ. ರಣಜಿ ಕ್ರಿಕೆಟ್​ನಲ್ಲಿ ಶೇ. 99 ರಷ್ಟು ಆಟಗಾರರು ನನ್ನ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದ್ದರು. ಒಂದು ವೇಳೆ ನಾನು ಅಂಪೈರ್​ ಕೆಟ್ಟ ನಿರ್ಧಾರಕ್ಕೆ ಔಟಾದರೆ ಎದುರಾಳಿ ತಂಡದ ಆಟಗಾರರು ನನ್ನನ್ನು ವಾಪಸ್​ ಕರೆಸುತ್ತಿದ್ದರೆ?" ಎಂದು ಪ್ರಶ್ನೆ ಹಾಕಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಕಾರ್ಯಕ್ರಮದಲ್ಲಿ ಮತ್ತೊಬ್ಬ ಆಟಗಾರ ಕನ್ನಡಿಗ ಮಯಾಂಕ್​ ಪ್ರತಿಕ್ರಿಯಿಸಿ "ನಾನಾದರೂ ನಮ್ಮ ತಂಡ ಅಂತಹ ಸನ್ನಿವೇಶದಲ್ಲಿದ್ದಾಗ ಹಾಗೇ ಮಾಡುತ್ತಿದ್ದೆ. ಇನ್ನು ಕೆಟ್ಟ ನಿರ್ಧಾರಕ್ಕೆ ಪೂಜಾರ ಔಟ್​ ಎಂದು ತೀರ್ಪು ಬಂದರೆ ವಾಪಸ್​ ಕರೆಸುತ್ತಿರಲಿಲ್ಲ" ಎಂದು ಒಪ್ಪಿಕೊಂಡಿದ್ದಾರೆ.

ABOUT THE AUTHOR

...view details