ಕರ್ನಾಟಕ

karnataka

ETV Bharat / briefs

ಮಹಿಳಾ ಪೈಲಟ್ ಜತೆ ಇಂದಿರಮ್ಮನ ಮೊಮ್ಮಗಳು.. ನಾರಿ ಶಕ್ತಿ ಜಾಗೃತಿಗೊಳಿಸ್ತಿದ್ದಾರಾ ಪ್ರಿಯಾಂಕಾ ಗಾಂಧಿ! - ಉತ್ತರಪ್ರದೇಶ

ಬಾಯಿಯೋ ಔರ್‌ ಬೆಹ್ನೋ ( ಸೋದರರೇ ಮತ್ತು ಸಹೋದರಿಯರೇ) ಅಂತಾ ಎಲ್ಲ ರಾಜಕಾರಣಿಗಳು ಭಾಷಣ ಆರಂಭಿಸುತ್ತಾರೆ. ಪ್ರಧಾನಿ ಮೋದಿ ಸಹ ಮೊದಲು ಹೇಳುವ ವಾಕ್ಯವೇ ಇದಾಗಿರುತ್ತೆ. ಆದರೆ, ಯುಪಿ ಪೂರ್ವಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಒಂದಿಷ್ಟು ಭಿನ್ನವಾಗಿ ಗೋಚರಿಸುತ್ತಿದ್ದಾರೆ.

ಪ್ರಿಯಾಂಕಾ ಗಾಂಧಿ

By

Published : Apr 16, 2019, 3:28 PM IST

ಫತೇಹ್‌ಪುರ್‌ಸಿಕ್ರಿ, (ಯುಪಿ) : ಉತ್ತರಪ್ರದೇಶದ ಫತೇಹ್‌ಪುರ್‌ ಸಿಕ್ರಿ ಸಂಸತ್‌ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ನಿನ್ನೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಸಾಕಷ್ಟು ಖುಷಿಯಾಗಿದ್ದರು. ಅದಕ್ಕೆ ಕಾರಣ ಮಹಿಳಾ ಪೈಲಟ್‌. ಕಾಪ್ಟರ್‌ನಲ್ಲಿ ಮಹಿಳಾ ಪೈಲಟ್‌ ಜತೆ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಹಾರಾಟ ನಡೆಸಿರೋದಕ್ಕೆ ಹೆಮ್ಮೆ ಅನಿಸುತ್ತಿದೆ ಅಂತಾ ಹೇಳಿಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ

ಬಾಯಿಯೋ ಔರ್‌ ಬೆಹ್ನೋ ( ಸೋದರರೇ ಮತ್ತು ಸಹೋದರಿಯರೇ) ಅಂತಾ ಎಲ್ಲ ರಾಜಕಾರಣಿಗಳು ಭಾಷಣ ಆರಂಭಿಸ್ತಾರೆ. ಪ್ರಧಾನಿ ಮೋದಿ ಸಹ ಮೊದಲು ಹೇಳುವ ವಾಕ್ಯವೇ ಇದಾಗಿರುತ್ತೆ. ಆದರೆ, ಯುಪಿ ಪೂರ್ವಪ್ರಾಂತ್ಯದ ಪ್ರ. ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಒಂದಿಷ್ಟು ಭಿನ್ನವಾಗಿ ಗೋಚರಿಸುತ್ತಿದ್ದಾರೆ. ತಮ್ಮ ಭಾಷಣಕ್ಕೂ ಮೊದಲು ಅವರು ಬೆಹ್ನೋ ಔರ್ ಬಾಯಿಯೋ (ಸೋದರಿಯರೇ ಹಾಗೂ ಸಹೋದರರೇ) ಅಂತಾ ಭಾಷಣ ಆರಂಭಿಸ್ತಾರೆ. ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಮೇಲೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಮೊದಲ ಸಾರ್ವಜನಿಕ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ, ಸೋದರಿಯರೇ ಹಾಗೂ ಸೋದರರೇ ಅಂತಾ ಭಾಷಣ ಆರಂಭಿಸಿದ್ದರು. ಆ ಮೂಲಕ ತಾವು ಮಹಿಳಾ ಪರ ದನಿಯಾಗುವ ಸೂಚನೆ ನೀಡಿದ್ದರು. ಪ್ರಿಯಾಂಕಾ ಮಹಿಳಾ ಸಶಕ್ತಿಕರಣಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸಂಸದೆ ಸುಶ್ಮಿತಾದೇವ ಮೊದಲ ಬಾರಿಗೆ ಪ್ರಿಯಾಂಕಾರ ಈ ನಡೆಯನ್ನ ಶ್ಲಾಘಿಸಿದ್ದರು. ಅಷ್ಟೇ ಅಲ್ಲ, ಸಾಂಪ್ರದಾಯಿಕ ಭಾಷಣ ಶೈಲಿ ಮುರಿದು ಪ್ರಿಯಾಂಕಾ ಮಹಿಳಾ ಪರ ದನಿಯಾಗ್ತಿದ್ದಾರೆ. ಇದನ್ನ ಯಾರೂ ಕೂಡ ಗುರುತಿಸಿಲ್ಲ ಅಂತಾ ಸುಶ್ಮಿತಾದೇವ್, ಪ್ರಿಯಾಂಕಾ ಮೊದಲ ಭಾಷಣದ ವಿಡಿಯೋ ತುಣುಕನ್ನ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಶೇರ್ ಮಾಡಿದ್ದರು.

ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬಂದರೆ ಸಂಸತ್‌ನಲ್ಲಿ ಉದ್ಯೋಗ ಮತ್ತು ಶಿಕ್ಷಣವೂ ಸೇರಿ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಈಗ ನಿನ್ನೆ ಪ್ರಿಯಾಂಕಾಂ ಗಾಂಧಿ ಫತೇಹ್‌ಪುರ್‌ ಸಿಕ್ರಿಗೆ ಮಹಿಳಾ ಪೈಲಟ್‌ ಇರುವ ಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ. ಮಹಿಳಾ ಪೈಲಟ್‌ ಜತೆಗಿರುವ ಫೋಟೋವೊಂದನ್ನ ಟ್ವಿಟರ್‌ನಲ್ಲಿ ಪ್ರಿಯಾಂಕಾ ಶೇರ್ ಮಾಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಮಹಿಳಾ ಪೈಲಟ್‌ ಜತೆ ಹಾರಾಟ ನಡೆಸಿದ್ದು ತುಂಬಾ ಹೆಮ್ಮೆಯ ಸಂಗತಿ ಅಂತಾ ಆ ಪೋಟೋಗೆ ಕಾಪ್ಷನ್‌ ನೀಡಿದ್ದಾರೆ.

ABOUT THE AUTHOR

...view details