ಕರ್ನಾಟಕ

karnataka

ETV Bharat / briefs

ಬಾಬ್ರಿ ಮಸೀದಿ ಕೆಡವಿದ್ದು ಹೆಮ್ಮೆಯ ವಿಚಾರ: ಕರ್ಕರೆ ಹೇಳಿಕೆ ನಂತರ ಸಾಧ್ವಿ ಹೊಸ ಬಾಂಬ್​ - ಸಾಧ್ವಿ ಪ್ರಗ್ಯಾ ಸಿಂಗ್​

ಬಾಬ್ರಿ ಮಸೀದಿಯನ್ನು ಕೆಡವಿದ್ದು ಹಿಂದೂಗಳ ಹೆಮ್ಮೆಯ ವಿಚಾರ ಎಂದು ಹೇಳುವ ಮೂಲಕ ಸಾಧ್ವಿ ಪ್ರಗ್ಯಾ ಸಿಂಗ್​​​​​ ಹೊಸದೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಸಾಧ್ವಿ

By

Published : Apr 21, 2019, 10:25 AM IST

ಭೋಪಾಲ್​:ತಾವು ಕೊಟ್ಟ ಶಾಪದಿಂದಲೇ ಮುಂಬೈ ದಾಳಿ ಹಿಮ್ಮೆಟ್ಟಿಸಿದ ವೀರ ಕಲಿ ಹೇಮಂತ್​ ಕರ್ಕರೆ ಉಗ್ರರ ಗುಂಡಿಗೆ ಬಲಿಯಾದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಲೆಗಾಂವ್​ ಸ್ಫೋಟದ ಆರೋಪಿ ಹಾಗೂ ಭೋಪಾಲ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್​ ಅವರು ಮತ್ತೊಂದು ಬಾಂಬ್​ ಸಿಡಿಸಿದ್ದಾರೆ.

ಬಾಬ್ರಿ ಮಸೀದಿಯನ್ನು ಕೆಡವಿದ್ದು ಹಿಂದೂಗಳ ಹೆಮ್ಮೆಯ ವಿಚಾರ ಎಂದು ಹೇಳುವ ಮೂಲಕ ಹೊಸದೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾಧ್ವಿ, ಬಾಬ್ರಿ ಮಸೀದಿ ಕೆಡವಿದ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ. ಬದಲಾಗಿ ಆ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ನಮ್ಮ ರಾಮ ಮಂದಿರದಲ್ಲಿ ಕೆಲವು ಅಪಚಾರ ಎಸಗುವ ವಸ್ತುಗಳಿದ್ದವು ಅವನ್ನು ನಾವು ತೆರವುಗೊಳಿಸಿದೆವು ಅದರಲ್ಲಿ ತಪ್ಪೇನು? ಇದು ದೇಶದ ಹಿಂದೂಗಳ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಅದಕ್ಕೆ ನಾವು ಸರಿಯಾದ ಉತ್ತರ ನೀಡಿದ್ದೇವೆ ಎಂದು ಸಾಧ್ವಿ ಹೇಳಿದ್ದಾರೆ.

ABOUT THE AUTHOR

...view details