ಕರ್ನಾಟಕ

karnataka

ETV Bharat / briefs

ಪುರಸಭೆಯ ಮಾಜಿ ಉಪಾಧ್ಯಕ್ಷನ ಪುತ್ರರಿಂದ ಹಲ್ಲೆ ಆರೋಪ.. ಕೆಲಸ ಮೊಟಕುಗೊಳಿಸಿ ಕಾರ್ಮಿಕರ ಪ್ರತಿಭಟನೆ - undefined

ಬೀದಿ ದೀಪ ಅಳವಡಿಸುವ ಕುರಿತು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಮಾಜಿ ಪುರಸಭೆ ಉಪಾಧ್ಯಕ್ಷರ ಪುತ್ರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕಾರ್ಮಿಕರ ಪ್ರತಿಭಟನೆ

By

Published : Jun 1, 2019, 10:55 AM IST

ಚಿಕ್ಕೋಡಿ: ಅಥಣಿ ಮಾಜಿ ಪುರಸಭೆ ಉಪಾಧ್ಯಕ್ಷರ ಪುತ್ರ ಸಚಿನ್​ ಪರಾಂಜಪೆ ಹಾಗೂ ಗೌತಮ್​ ಪರಾಂಜಪೆ ಪುರಸಭೆ ಗುತ್ತಿಗೆ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪುರಸಭೆ ಸಿಬ್ಬಂದಿಗಳು ಕೆಲಸ ಮೊಟಕುಗೊಳಿಸಿದ್ದಾರೆ.

ಕೆಲಸ ಮೊಟಕುಗೊಳಿಸಿ ಕಾರ್ಮಿಕರ ಪ್ರತಿಭಟನೆ

ಶುಕ್ರವಾರ ಸಾಯಂಕಾಲ ಅಥಣಿ ಪುರಸಭೆ ಆವರಣದಲ್ಲಿ ಘಟನೆ ನಡೆದಿದೆ. ಬೀದಿ ದೀಪ ಅಳವಡಿಸುವ ಕುರಿತು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಮಾಜಿ ಪುರಸಭೆ ಉಪಾಧ್ಯಕ್ಷರ ಪುತ್ರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಕಾರ್ಮಿಕರು ಕೆಲಸಕ್ಕೆ ಹೋಗದೇ ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ ಆಗಮನಕ್ಕೆ ಕಾಯ್ದು ಕುಳಿತಿದ್ದಾರೆ.

For All Latest Updates

TAGGED:

ABOUT THE AUTHOR

...view details