ಕರ್ನಾಟಕ

karnataka

ETV Bharat / briefs

ಕನ್ನಡದ ಕೋಟ್ಯಧಿಪತಿ ಸೀಸನ್-4: 'ಕಷ್ಟ ಕಾಲದಲ್ಲಿ ಬರೋದು ಫ್ರೆಂಡ್ಸ್‌ ರೀ' ಪ್ರೋಮೋ ಭಾರಿ ಸದ್ದು - undefined

ಮತ್ತೆ ಬರುತ್ತಿದೆ ನಿಮ್ಮೆಲ್ಲರ ನೆಚ್ಚಿನ ಗೇಮ್​ ಶೋ ಕನ್ನಡದ ಕೋಟ್ಯಧಿಪತಿ. ಇದರ 4 ನೇ ಅವೃತ್ತಿ ಆರಂಭವಾಗುತ್ತಿದ್ದು, ಈಗಾಗಲೇ ಪ್ರೋಮೋಗಳು ಸಖತ್​ ಸದ್ದು ಮಾಡ್ತಿವೆ.

ಕನ್ನಡದ ಕೋಟ್ಯಧಿಪತಿ..

By

Published : May 26, 2019, 5:41 PM IST

Updated : May 26, 2019, 6:35 PM IST

ಬುದ್ಧಿಶಕ್ತಿಯ ಮೂಲಕ ಕೋಟ್ಯಧಿಪತಿಯನ್ನಾಗಿ ಮಾಡುವ ಕನ್ನಡದ ಏಕೈಕ ರಿಯಾಲಿಟಿ ಶೋ 'ಕನ್ನಡದ ಕೋಟ್ಯಧಿಪತಿ'ಯ 4 ನೇ ಆವೃತ್ತಿ ಶೀಘ್ರದಲ್ಲೆ ಬರಲಿದೆ. ಸದ್ಯ ತನ್ನ ಪ್ರೋಮೋ ಮೂಲಕ ಸಖತ್​ ಸದ್ದು ಮಾಡುತ್ತಿದೆ.

ಬ್ಯಾಕ್ ಟು ಬ್ಯಾಕ್ ಹಿಟ್ ರಿಯಾಲಿಟಿ ಶೋ ಕೊಡುತ್ತಿರುವ ಮಾಧ್ಯಮಗಳಲ್ಲಿ ತನ್ನದೇ ಶೈಲಿಯಲ್ಲಿ ಜನರ ಮನಸ್ಸಿಗೆ ಹತ್ತಿರವಾಗಿರುವ ಗೇಮ್ ಶೋ ಕನ್ನಡದ ಕೋಟ್ಯಧಿಪತಿ. ಕನ್ನಡದ ಕೋಟ್ಯಧಿಪತಿಯ 4 ನೇ ಅವೃತ್ತಿ ಆರಂಭವಾಗುತ್ತಿದ್ದು, ಈಗಾಗಲೇ ಪ್ರೋಮೋಗಳು ವೈರಲ್ ಆಗುತ್ತಿವೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ಇದೀಗ ಹೊಸತನದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

‘ಕಷ್ಟ ಕಾಲದಲ್ಲಿ ಬರೋದು ಫ್ರೆಂಡ್ಸ್ ರೀ..’ ಎಂಬ ಟ್ಯಾಗ್​ಲೈನ್ ಮೂಲಕ ಈ ಪ್ರೊಮೋ ಹೆಚ್ಚು ಸದ್ದು ಮಾಡ್ತಿದೆ. ಈ ಬಾರಿಯ ಸೀಸನ್ ಹೊಸತನದಿಂದ ಕೂಡಿರುತ್ತದೆ. ನಿರೂಪಣೆ ಹಾಗೂ ಆಯ್ಕೆ ಎಲ್ಲವೂ ಬದಲಾಗಿರುತ್ತದೆ. ಪುನೀತ್ ರಾಜಕುಮಾರ್ ಕೂಡ ಹೊಸ ಲುಕ್​ನಲ್ಲಿ ಮಿಂಚಲಿದ್ದಾರೆ. ಕೆಲ ತಿಂಗಳುಗಳ ಹಿಂದೆ ಸ್ಪರ್ಧಿಗಳ ಆಯ್ಕೆ ಮಾಡುವ ರೀತಿಯನ್ನು ಹೇಳಲಾಗಿತ್ತು. 10 ಪ್ರಶ್ನೆಗಳನ್ನು ಕೇಳಲಾಗಿದ್ದು, ಈ 10 ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಮೊದಲ ಸುತ್ತಿನ ಆಡಿಷನ್‌ಗೆ ಅವಕಾಶ ದೊರೆಯುತ್ತದೆ.

ಈ ಬಾರಿ ಯಾರೆಲ್ಲಾ ತಮ್ಮ ಚಾಣಾಕ್ಷತೆಯಿಂದ ಕೋಟ್ಯಧಿಪತಿ ಸ್ಥಾನ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.

Last Updated : May 26, 2019, 6:35 PM IST

For All Latest Updates

TAGGED:

ABOUT THE AUTHOR

...view details