ರಾಯ್ಬರೇಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಎಐಸಿಸಿ ಉ.ಪ್ರ. ಮಹಾ ಕಾರ್ಯದರ್ಶಿ ಹಾಗೂ ಸೋನಿಯಾ ಪುತ್ರಿ ಪ್ರಿಯಾಂಕಾ ವಾದ್ರಾ ಅವರು ಬೆಂಬಲಿಗರು ಹುಬ್ಬೇರುವಂತೆ ಮಾಡಿದರು.
ರಾಯ್ಬರೇಲಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಪ್ರಿಯಾಂಕಾ ಅವರು ಗುರುವಾರ ಹಾವಾಡಿಗರನ್ನು ಭೇಟಿಯಾದರು. ಅವರೊಂದಿಗೆ ಸ್ವಲ್ಪ ಹೊತ್ತು ಕಳೆದ ಪ್ರಿಯಾಂಕಾ ಅವರು ಬುಟ್ಟಿಯೊಳಗಿದ್ದ ಹಾವನ್ನು ಭಯಪಡದೆ ಮುಟ್ಟಿ ನೋಡಿದರು.
ಪ್ರಿಯಾಂಕಾ ಅವರೊಂದಿಗೆ ಹಾವಾಡಿಗರು ಭೇಟಿಯಾದಾಗ ಒಂದು ಕರಿ ನಾಗರ ಅವರ ಕಾಲ ಬಳಿಯೇ ಇತ್ತು. ಹಾವನ್ನು ನೋಡಿ ಬೆಂಬಲಿಗರು ಹಿಂದೆ ಸರಿಯುವಾಗ ಯಾಕ್ರಪ್ಪಾ ಹೆದರುತ್ತೀರಿ? ಅದು ಏನೂ ಮಾಡಲ್ಲ ಎಂದು ಧೈರ್ಯ ತುಂಬಿದರು.
ಆದ್ರೂ ಬೆಂಬಲಿಗರಿಗೆ ಧೈರ್ಯ ಸಾಲಲಿಲ್ಲ. ಆಗ ಪ್ರಿಯಾಂಕಾ ಅವರು ಒಂದು ಹೆಜ್ಜೆ ಮುಂದೆ ಹೋಗಿ ಬುಟ್ಟಿಯಲ್ಲಿದ್ದ ಸಣ್ಣ ಹಾವೊಂದನ್ನು ಕೈ ನಲ್ಲಿ ಹಿಡಿದರು. ಇನ್ನಷ್ಟು ಹಾವುಗಳನ್ನು ಮುಟ್ಟಿ ನೋಡಿ ಇವು ಕಚ್ಚುತ್ತವೋ ಇಲ್ಲವೋ ಎಂಬುದನ್ನು ದೃಢಪಡಿಸಿಕೊಂಡರು.
ಹಿಂದೆ ಇದ್ದ ಊರಿನ ಜನರು ಪ್ರಿಯಾಂಕಾ ಮೇಡಂ ನಿಮಗೆ ಭಯವಾಗುವುದಿಲ್ವೇ ಎಂದು ಕೇಳಿದ್ರು, ಏನೂ ಉತ್ತರಿಸದ ಸೋನಿಯಾ ಪುತ್ರಿ ಒಮ್ಮೆ ನಕ್ಕರು.