ವಯನಾಡು(ಕೇರಳ): ಅಮೇಥಿ ಜತೆಜತೆಗೆ ಕೇರಳದ ವಯನಾಡುವಿನಿಂದ ಸ್ಪರ್ಧೆ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪರ ಸಹೋದರಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ ನಡೆಸಿದರು.
ಕಳೆದು ಐದು ವರ್ಷಗಳ ಹಿಂದೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಮೇಲೆ ಹೆಚ್ಚಿನ ನಂಬಿಕೆ ಇಡಲಾಗಿತ್ತು. ಆದರೆ, ಬಿಜೆಪಿ ಜನರ ನಂಬಿಕೆಗೆ ದ್ರೋಹವೆಸಗಿದೆ. ಕೇಂದ್ರದಲ್ಲಿ ಅದು ಅಧಿಕಾರ ನಡೆಸುತ್ತಿರುವುದು, ಅದರ ಅಭಿವೃದ್ಧಿಗಾಗಿಯೇ ಹೊರತು, ಜನಸಾಮಾನ್ಯರಿಗಾಗಿ ಅಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯುವ ಉದ್ದೇಶದಿಂದ ಪ್ರತಿಯೊಬ್ಬರ ಅಕೌಂಟ್ಗೆ ತಲಾ 15 ಲಕ್ಷ ಹಣ ಹಾಕುವುದಾಗಿ ಹೇಳಿತ್ತು. ಆದರೆ, ಅದೊಂದು ಸುಳ್ಳು ಹೇಳಿಕೆ ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದರು.
ನಾನು ನಿಮ್ಮ ಮುಂದೆ ನಿಂತಿರುವುದು ಆತನ ಪ್ರತಿರೂಪವಾಗಿ. ಆತ ಹುಟ್ಟಿದ ದಿನದಿಂದಲೂ ನನಗೆ ಚೆನ್ನಾಗಿ ಗೊತ್ತಿದೆ. ಈ ಚುನಾವಣೆಯಲ್ಲಿ ಆತ ನಿಮ್ಮ ಅಭ್ಯರ್ಥಿ. ಕಳೆದ 10 ವರ್ಷಗಳಲ್ಲಿ ವಿರೋಧಿಗಳಿಂದ ವೈಯಕ್ತಿಕ ಟೀಕೆಗಳಿಗೊಳಗಾಗುತ್ತಿದ್ದಾರೆ. ಇದೀಗ ಎದುರಾಳಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ತಿಳಿಸಿದರು.
ಇದೇ ವೇಳೆ ರಾಹುಲ್ ಗಾಂಧಿಯನ್ನ ಹಾಡಿಹೊಗಳಿದ ಪ್ರಿಯಾಂಕಾ, ನನ್ನ ಸಹೋದರ ರಾಹುಲ್, ನಮ್ಮ ತಾಯಿ ಸೋನಿಯಾ ಹಾಗೂ ತಂದೆ ರಾಜೀವ್ ಅವರನ್ನ ಕಳ್ಳ ಎಂದು ಕರೆದ ವ್ಯಕ್ತಿಯನ್ನ ಅಪ್ಪಿಕೊಳ್ಳುವ ಮೂಲಕ ವಿಶಾಲತೆ ಮೆರೆದಿದ್ದರು. ಇದರಿಂದಲೇ ಸ್ಪೂರ್ತಿ ಪಡೆದ ಅವರು, ಈ ಹಿಂದಿನ ಲೋಕಸಭಾ ಅಧಿವೇಶನದಲ್ಲಿ ತಮ್ಮ ಭಾಷಣದ ಬಳಿಕ ಪ್ರಧಾನಿ ಮೋದಿಯವರನ್ನ ಅಪ್ಪಿಕೊಂಡಿದ್ದರು. ಈ ಮೂಲಕ ತಮ್ಮನ್ನು ದ್ವೇಷಿಸುವವರನ್ನೂ ನಾವೂ ಪ್ರೀತಿಸುತ್ತೇವೆ ಎಂದು ತೋರಿಸಿಕೊಟ್ಟಿದ್ದರು. ಇದು ರಾಹುಲ್ ಗಾಂಧಿ ಹೃದಯ ವೈಶಾಲತೆಗೆ ಸಾಕ್ಷಿ ಎಂದು ಹೇಳಿದರು.